Recent Posts

Sunday, January 19, 2025
ಬಂಟ್ವಾಳ

ಸತ್ಯದ ತುಳುವೆರ್ ವತಿಯಿಂದ ದೇವಶ್ಯ ಪಡೂರು ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಮನೆಗೆ ವಿಶ್ವ ಹಿಂದು ಪರಿಷದ್ ಬಜರಂಗದಳ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಬಂಟ್ವಾಳ ಪ್ರಖಂಡದ ವತಿಯಿಂದ ಧನಸಹಾಯ – ಕಹಳೆ ನ್ಯೂಸ್

ಸತ್ಯದ ತುಳುವೆರ್ ವತಿಯಿಂದ ದೇವಶ್ಯ ಪಡೂರು ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಮನೆಗೆ, ಹತ್ತು ಹಲವಾರು ಸಮಾಜ ಮುಖಿ ಸೇವೆಗಳ ಮೂಲಕ ಊರಿನ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ವಿಶ್ವ ಹಿಂದು ಪರಿಷದ್ ಬಜರಂಗದಳ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಬಂಟ್ವಾಳ ಪ್ರಖಂಡದ ವತಿಯಿಂದ 10,000 ರೂ. ಚೆಕ್ ಅನ್ನು ಬಂಟ್ವಾಳ ಪ್ರಖಂಡದ ಸಹ ಸಂಚಾಲಕರಾದ ಸಂತೋಷ್ ಕುಲಾಲ್ ಸರಪಾಡಿಯವರ ಮುಂದಾಳತ್ವದಲ್ಲಿ ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಸರಪಾಡಿ ಖಂಡ ಸಮಿತಿಯ ಪ್ರಶಾಂತ್ ಕೊಟ್ಟಾರಿ ಪೂಪಾಡಿಕಟ್ಟೆ ಹಾಗೂ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಘಟಕದ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು