Sunday, January 19, 2025
ಅಂಕಣ

ಡಿಸೆಂಬರ್ 6  ವಿಶ್ವ ಗೃಹರಕ್ಷಕರ ದಿನಾಚರಣೆ- ಕಹಳೆ ನ್ಯೂಸ್

ಡಿಸೆಂಬರ್ 06 ನ್ನು ದೇಶದಾದ್ಯಂತ ವಿಶ್ವ ಗೃಹರಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ ಪ್ರಸಕ್ತ ದೇಶದ ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಪಾಲನೆಯಲ್ಲಿ ಸರಕಾರಿ ಭದ್ರತಾ ಪಡೆಗಳಿಗೆ ನೆರವಾಗುವ ದಿಶೆಯಲ್ಲಿ ಸರಕಾರದ ಗೃಹ ಇಲಾಖೆಯ ಅಧಿನದಲ್ಲಿರುವ ಖಾಕಿ ಸಮವಸ್ತ್ರಧಾರಿ ಸ್ವಯಂ ಸೇವಾ ಸಂಸ್ಥೆಯಾಗಿ ಅಪೂರ್ವ ಸೇವಾದಳವಾಗಿ ಗೃಹರಕ್ಷಕದಳ ಕಾರ್ಯನಿರ್ವಹಿಸುತ್ತಿದೆ

ಗೃಹರಕ್ಷಕದಳ ಎಂದರೆ “ಗೃಹ” ಎಂದರೆ ಮನೆ ಮನೆ ಎನ್ನುವ ಪದವನ್ನು ಇಲ್ಲಿ ಸಮಾಜ ಎಂದು ಅರ್ಥೈಸಲಾಗಿದೆ ಆದ್ದರಿಂದ ಸಮಾಜರಕ್ಷಣೆಯೇ ಗೃಹರಕ್ಷಣೆ “ದಳ”ಎಂಬುವುದು ಸ್ವಯಂಸೇವಾ ಸದಸ್ಯರ ಬಳಗ ಗೃಹರಕ್ಷಕದಳವೆಂದರೆ ಸರಕಾರದ ಗೃಹ ಇಲಾಖೆಯ ಅಧಿನದಲ್ಲಿರುವ ಖಾಕಿ ಸಮವಸ್ತ್ರ ಧರಿಸಿದ ಒಂದು ಸ್ವಯಂಸೇವಾ ಸಂಸ್ಥೆ “ನಿಷ್ಕಾಮ ಸೇವಾ” ಇದರ ಮೂಲ ದ್ಯೇಯ ರಾಜಕೀಯ, ಕೊಮುವಾರು,ಮತ್ತು ಬಾಷವಾರು ಪಂಗಡಗಳಿಂದ ದೂರವಿದ್ದು ತಮ್ಮ ನಿತ್ಯದ ಉದ್ಯೋಗದ ಮತ್ತು ದಿನಚರಿಯ ಜೊತೆ ದೇಶ ಸೇವೆಗೆ ಕೊಂಚ ಕಾಲವನ್ನು ಮೀಸಲಿಡುವ ರಾಷ್ಟೀಕರ ಸೇವಾದಳವಿದು ಶಾಂತಿ ಪಾಲನೆಯೇ ಇದರ ಮುಖ್ಯ ದ್ಯೇಯ ಶಾಂತಿ ಪಾಲನೆಯಲ್ಲಿ ಪೋಲಿಸರೊಂದಿಗೆ ಭುಜಕ್ಕೆ ಭುಜ ಕೊಟ್ಟು ಸೇವೆ ಸಲ್ಲಿಸುತ್ತಾರೆ

ಜಾಹೀರಾತು
ಜಾಹೀರಾತು
ಜಾಹೀರಾತು

ಗೃಹರಕ್ಷಕದಳದ ಸ್ಥಾಪನೆ:- ಗೃಹರಕ್ಷಕದಳವು ಸ್ವಯು ಸೇವಾ ಸಂಸ್ಥೆಯಾಗಿ ಪ್ರಪಂಚದ ಎರಡನೇ ಮಹಾಯುದ್ಧದ ಸಂಧರ್ಭದಲ್ಲಿ ಪ್ರಾರಂಭವಾಯಿತು 1946 ಡಿಸೆಂಬರ್ ನಲ್ಲಿ  ಗೃಹರಕ್ಷಕದಳವು ಬಾಂಬೇ ರಾಜ್ಯದಲ್ಲಿ ಸ್ಥಾಪನೆಯಾಯಿತು ಸೈನ್ಯಪಡೆಯನ್ನು ಹಿಮ್ಮಟ್ಟಿಸಲು ಪೋಲಿಸ್, ಮಿಲಿಟರಿ ಪಡೆಯ ಪರ್ಯಾಯವಾಗಿ ಜನರೇ ದೇಶವನ್ನು ರಕ್ಷಿಸಲು ರೂಪಿಸಿದ ನಾಗರಿಕ ಪಡೆ [Local Defence Volllinter] ಸ್ಥಳಿಯ ರಕ್ಷಣಾ ಕಾರ್ಯಕರ್ತ ಎಂದು ಕರೆಯುತ್ತಾರೆ ಆಗಿನ ಮುಂಬಯಿ ಪ್ರಾಂತ್ಯ ಕೋಮುಗಲಭೆಗಳಿಂದ ತತ್ತರಿಸಿದಾಗ ಕೆಲವು ಮಂದಿ ಸಮಾಜ ಸೇವಕರು,ನಾಗರಿಕ ಪ್ರಜ್ಞೆಯುಳ್ಳ ಯುವಕರು ನಾಡಿನ ಶಾಂತಿಪಾಲನೆ,ಜನರ ಮಾನ-ಪ್ರಾಣ ,ಮತ್ತು ಆಸ್ತಿ-ಪಾಸ್ತಿ ರಕ್ಷಣೆಗೆ ಮುಂದೆ ಬಂದರು ಈ ಸಮಯದಲ್ಲಿ ಆಗಿನ ಮುಂಬಯಿ ಸರಕಾರ ಇಂಥ ಸ್ವಯುಂ ಸೇವಾದಳದ ಅಗತ್ಯತೆಯನ್ನು ಮನಗಂಡು 1947ರಲ್ಲಿ ಮೊರಾರ್ಜಿ ದೇಸಾಯಿ ಗೃಹ ಮಂತ್ರಿ ಆಗಿದ್ದಾಗ  ಈ ಸಂಬಧ ಶಾಸನ ಬದ್ಧ ಕಾಯ್ದೆ ರೂಪಿಸಿ ಜನರಿಗೆ ಮತ್ತು ದೇಶಕ್ಕೆ ತುರ್ತು ಸಂಧರ್ಭದಲ್ಲಿ ರಕ್ಷಣೆ ನೀಡಲು ಗೃಹರಕ್ಷಕದಳವನ್ನು ಕೇಂದ್ರಡಳಿತ ಪ್ರದೇಶದಲ್ಲಿ ಆರಂಭಿಸಿ ಖಾಕಿ ಸಮವಸ್ತ್ರಕ್ಕೆ ಮನ್ನಣೆ ನೀಡಲಾಯಿತು ನಂತರ ಕಾಲಕ್ರಮೇಣ ಇತರ ರಾಜ್ಯಗಳು ಆ ಮಾರ್ಗವನ್ನು ಅನುಸರಿಸಿದವು ಮೊದಲು ಪೋಲಿಸರ ಜೊತೆ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಇದರ ಸೇವೆಯನ್ನು ಬಳಸಲಾಗುತ್ತಿತ್ತು ಬರುಬರುತ್ತಾ ಗೃಹರಕ್ಷಕದಳ ಸೇವೆಯನ್ನು ರಾಷ್ಟ್ರದ ಎಲ್ಲಾ ರೀತಿಯ ಪರಿಸ್ಥಿತಿಗಳಲ್ಲಿ ಪೋಲಿಸರು ಮತ್ತು ರಾಷ್ಟ್ರ ರಕ್ಷಣಾ ಪಡೆಗಳ ಜೊತೆ ಉಪಯೋಗಿಸಲಾಗುತ್ತಿದೆ ಇವರಿಗೆ ಗೊತ್ತಾದ ಸರ್ಕಾರಿ ಸಂಬಳವಿಲ್ಲಾ ಸರ್ಕಾರ ನಿಗದಿ ಮಾಡಿದ ಗೌರವಧನ,ಇತರಭತ್ಯೆಗಳು ಮಾತ್ರ ದೊರೆಯುತ್ತದೆ ಪ್ರಸ್ತುತ ದಿನಗಳಲ್ಲಿ ಸರ್ಕಾರ ನಿಗದಿಪಡಿಸಿದ್ದಂತೆ ಆರಕ್ಷಕ ಠಾಣೆಯಲ್ಲಿ ಸೇವೆ ‌ಸಲ್ಲೀಸುವ ಗೃಹರಕ್ಷಕರಿಗೆ ದಿನವೊಂದಕ್ಕೆ750/- ಹಾಗೂ ಇತರೆ ಸೇವೆ ಸಲ್ಲಿಸುವ ಗೃಹರಕ್ಷಕರಿಗೆ 380/-  ಗೌರವಧನ ಗೃಹರಕ್ಷಕರಿಗೆ ನೀಡಲಾಗುತ್ತದೆ

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕ ರಾಜ್ಯದಲ್ಲಿ ಗೃಹರಕ್ಷಕದಳ ಸ್ಥಾಪನೆ:-ಕರ್ನಾಟಕ ರಾಜ್ಯದಲ್ಲಿ ಗೃಹರಕ್ಷಕದಳ1962 ರಲ್ಲಿ ಉದಯವಾಯಿತು ಗೃಹರಕ್ಷಕ ಕಾಯ್ದೆ (1962 ರ ಕಾಯ್ದೆ ಸಂಖ್ಯೆ 35ರಲ್ಲಿ)ರಚಿತಗೊಂಡಿದೆ ಕರ್ನಾಟಕದಲ್ಲಿ  ಗೃಹರಕ್ಷಕರ ಕಾಯ್ದೆಯನ್ನು ರೂಪಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಿತು ರಾಜ್ಯದಲ್ಲಿ ಮೊದಲ ಬಾರಿಗೆ ರಾಜ್ಯ ಗೃಹರಕ್ಷಕದಳದ ಮಾಹಾ ಸಮಾದೇಷ್ಠಕರಾಗಿ ಶ್ರೀ ಆರ್.ಎ.ಮುಂಡ್ಕೂರ್ ಐ.ಪಿ.ಎಸ್.ಇವರು ಕರ್ನಾಟಕದಲ್ಲಿ ಗೃಹರಕ್ಷಕದಳ ರಚನೆಗೆ ಭದ್ರ ಬುನಾದಿಗೆ ಅಡಿಪಾಯ ಹಾಕಿದವರು

ಗೃಹರಕ್ಷಕದಳ ಸೇರಲು ಯಾರು ಅರ್ಹರು:-ಆಯಾ ಜಿಲ್ಲಾ ವಾಸಿಗಳು ಭಾರತೀಯ ನಾಗರಿಕರು ಈ ದಳವನ್ನು ಸೆರಬಹುದು ವಿದ್ಯಾರ್ಹತೆ SSLC ಪಾಸಗಿರಬೇಕು, ವಯಸ್ಸು 19-50 ಅಂತರವಿರಬೇಕು,ನಿರ್ದಿಷ್ಟ ದೇಹದ ಅಳತೆಯೊಂದಿಗೆ ಕೂಡಿ ದೃಢಕಾಯವಾಗಿರಬೇಕು, ಓದು ಬರಹ ತಿಳಿದರಬೇಕು, ಹಾಗೂ ಯಾವುದೇ ರೀತಿಯಿಂದಲೂ ನ್ಯಾಯಲಯದಿಂದ ಶಿಕ್ಷೆಗೆ ಒಳಗಾಗಿರಬಾರದು,ಸಮಾಜ ಕಂಟಕ ವ್ಯಕ್ತಿಯಾಗಿರಬಾರದು,ಯಾವುದೇ ರೀತಿಯಲ್ಲೂ ಅಂಗಂಗಾ ನ್ಯೂನತೆಗಳು ಇರಬಾರದು, ವ್ಯಕ್ತಿಯ ಘನತೆ ,ದೇಹ ದೃಢತೆ,ಆತನ ಸೇವೆ ಎಲ್ಲವನ್ನು ಪರಿಗಣಿಸಿ ಸರಕಾರ ವಿಧಿಸಿರುವ ನಿಯಮದಂತೆ ಆಯ್ಕೆ ಮಾಡಲಾಗುತ್ತದೆ

ಸೇರ್ಪಡೆ ಕ್ರಮ ಹೇಗೆ:-ಆಯಾ ಘಟಕದಿಂದ ಗೃಹರಕ್ಷಕದಳ ಸೇರಲು ಇಚ್ಛೆ ಇರುವವರು ಮೊದಲಿಗೆ ಜಿಲ್ಲಾ ಕಚೇರಿಂದ ಅರ್ಜಿ ಪಡೆದು ನಂತರ ಅದನ್ನು ಭರ್ತಿ ಮಾಡಿ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು ನಂತರ ನಿಮ್ಮ ಅರ್ಜಿಯನ್ನು ಜಿಲ್ಲಾ ಮಟ್ಟದ ಗೃಹರಕ್ಷಕದಳ ಅಧಿಕಾರಿಗಳು ಪರಿಶೀಲಿಸಿದ ನಂತರ ಅರ್ಜಿಯನ್ನು ಪೋಲಿಸ್ ಇಲಾಖೆಯ ಪರಿಶೀಲನೆಗೆ ಕಳುಹಿಸಲಾಗುತ್ತದೆ ಪೋಲಿಸ್ ಇಲಾಖೆಯಿಂದ ಪುರಸ್ಕರಿಸಲ್ಪಟ್ಟ ಅರ್ಜಿಯನ್ನು ಬೆಂಗಳೂರಿನ ಗೃಹರಕ್ಷಕದಳ ಕೇಂದ್ರ ಕಚೇರಿಗೆ ಕಳುಹಿಸಲಾಗುತ್ತದೆ ಬೆಂಗಳೂರಿನಲ್ಲಿ ಆರಕ್ಷಕ ಮಾಹನಿರ್ದೇಶಕರು ಹಾಗೂ ಗೃಹರಕ್ಷಕದಳದ ಮಾಹ ಸಮಾದೇಷ್ಟರವರ ಕಚೇರಿಯಿಂದ ಅನುಮೋದಿಸಡುವ ಅರ್ಜಿದಾರರಿಗೆ ಸಂಬಂಧ ಪಟ್ಟ ಜಿಲ್ಲೆಯ ಜಿಲ್ಲಾ ಕಮಾಡೆಂಟ್ ರವರು “ಸಿ” ಪ್ರಮಾಣ ಪತ್ರ  ನೀಡಲಾಗುತ್ತದೆ “ಸಿ” ಪ್ರಮಾಣ ಪತ್ರ ದೊರೆತ ಬಳಿಕ ಅಧಿಕೃತವಾಗಿ ಗೃಹರಕ್ಷಕದಳ ಸದಸ್ಯ ತ್ವ ದೊರಕಿದಂತಾಗಿ ಬಳಿಕ ಆಯ್ಕೆಯಾದ ಮಂದಿಗೆ ಜಿಲ್ಲಾ ಮಟ್ಟದಲ್ಲಿ ಮೂಲ ತರಬೇತಿ ನೀಡಿ ನಂತರ ಕಾಲಕ್ರಮೇಣ ಬೆಂಗಳೂರು ಗೃಹರಕ್ಷಕದಳ ಕಚೇರಿಯ ತರಭೇತಿ ಅಕಾಡೆಮಿಯಲ್ಲಿ ತರಭೇತಿ ನೀಡಲಾಗುತ್ತದೆ

ಗೃಹರಕ್ಷಕದಳ ಸೇವೆಯನ್ನು ಎಲ್ಲೆಲ್ಲಿ ಬಳಸಲಾಗುತ್ತದೆ:-

2020-2021 ರವರ್ಷಗಳಲ್ಲಿ ಕೊರೋನ  ಮಾಹಾಮಾರಿ ವಿರುದ್ಧ ಕೊರೋನ ವಾರಿಯರ್ಸ್ ಆಗಿ ಗೃಹರಕ್ಷಕರು ಸೇವೆ ಸಲ್ಲಿಸಿರುತ್ತಾರೆ ಹಾಗೂ 2021 ರ ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ಪೋಲಿಸರ ಜೊತೆಗೆ “ಮಾರ್ಷಲ್” ಗಳಾಗಿ ವಿಶೇಷ ಕರ್ತವ್ಯ ನಿರ್ವಹಿಸಿರುತ್ತಾರೆ

1】ದೇಶದ ಅಂತರಿಕ ಭದ್ರತೆಯಲ್ಲಿ ಪೋಲಿಸರೊಂದಿಗೆ ಸೇರಿ ಸೇವೆ ಸಲ್ಲಿಸುವುದು,ಹಾಗೂ ಪೋಲಿಸರ ಜೊತೆ ಸಂಚಾರ ನಿಯಂತ್ರಣ, ಕಾನೂನು ಸುವ್ಯವಸ್ಥೆ ಕಾಪಾಡುವುದು
2】ಅಪರಾಧ ತಡೆಗಟ್ಟುವ ದೃಷ್ಟಿಯಿಂದ ಪೋಲಿಸರ ಜೊತೆಯಲ್ಲಿ ಗಸ್ತು ತಿರುಗುವುದು
3】ನೈಸರ್ಗಿಕ ವಿಕೋಪಗಳಾದ ನೆರೆಹಾವಳಿ,ಸುನಾಮಿ, ಭೂಕುಸಿತ, ಭೂಕಂಪ, ಇತ್ಯಾದಿ ಸಂದರ್ಭದಲ್ಲಿ ಜಿಲ್ಲಾ ವಿಪತ್ತು ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಜೊತೆ ಸೇರಿ ಸೇವೆ ಸಲ್ಲಿಸುವುದು
4】1961 ರ ಕರ್ನಾಟಕ ಮದ್ಯಪಾನ ಪ್ರತಿಬಂಧಕ ಕಾಯ್ದಿಯನ್ನು ಜಾರಿಗೊಳಿಸಲು ಅಬಕಾರಿ ಇಲಾಖೆಯ ಕಳ್ಳಭಟ್ಟಿ ಸಾರಾಯಿ ಮತ್ತು ಅನಧಿಕೃತ ಮದ್ಯಮಾರಟ ನಿಯಂತ್ರಣಕ್ಕೆ ಸಂಬಂಧ ಪಟ್ಟ ಇಲಾಖೆಯ ಜೊತೆ ಕೈ ಜೋಡಿಸಿವುದು
5】ಪ್ರತಿಭಟನೆ, ಮುಸ್ಕರ,ವಿವಾದಾತ್ಮಕ ವಲ್ಲದ ಪ್ರತಿಫಟನೆ,ಕ್ರೀಡಾಕೂಟ, ಯಾವುದೇ ಸಂಘಟನೆಗಳು ನಡೆಸುವ ಕಾರ್ಯಕ್ರಮಕ್ಕೆ ಗೃಹರಕ್ಷಕರನ್ನು ಬಳಸಬಹುದು ಆದರೆ ರಾಜ್ಯ(ಆರಕ್ಷಕ ಮಹಾ ನಿರ್ದೇಶಕರು ಹಾಗೂ ಗೃಹರಕ್ಷಕದಳದ ಮಾಹಾಸಮಾದೇಷ್ಠರು) ಇವರ ಪೂರ್ವನುಮತಿ ಕಡ್ಡಾಯ

ಪ್ರತಿ ವರ್ಷ ಡಿಸೆಂಬರ್ 6 ನ್ನು ದೇಶದಾದ್ಯಂತ ಅಖಿಲ ಭಾರತ ಗೃಹರಕ್ಷಕರ ಆಚರಿಸರಿಸಲಾಗುತ್ತದೆ ಈ ಸಂದರ್ಭದಲ್ಲಿ ಪ್ರತಿಯೊಂದು ಗೃಹರಕ್ಷಕದಳದ ಕಟ್ಟಡದ ಮೇಲೆ ಗೃಹರಕ್ಷಕದಳದ ಬಾವುಟವನ್ನು ಹಾರಿಸಲಾಗುತ್ತದೆ ಪ್ರತಿ ಜಿಲ್ಲೆಯ ಜಿಲ್ಲಾ ಕಚೇರಿಯಲ್ಲಿ ಸರ್ಕಾರದ ನಿರ್ದೇಶನದಂತೆ ಗೃಹರಕ್ಷಕದಳದ ದಿನಾಚರಣೆಯನ್ನು ಆಚರಿಸುತ್ತಾರೆ

ಏನೇ ಇರಲಿ ಸಮಾಜದಲ್ಲಿ ಯಾವುದೇ ಪ್ರತಿಫಲ ಬಯಸದೇ ಸೇವಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕರಿಗೆ ಧನ್ಯವಾದಗಳನ್ನು ಸಲ್ಲಿಸುವ

                                                    ಬರಹಗಾರರು
                                             .✍️ದಿನೇಶ್.ಬೊಳ್ಳಾರ್
                                                   ಪ್ರಭಾರ ಘಟಕಾಧಿಕಾರಿ
                                        ಗೃಹರಕ್ಷಕದಳ ಉಪ್ಪಿನಂಗಡಿ ಘಟಕ