Recent Posts

Saturday, April 19, 2025
ಸುದ್ದಿ

ಮುಸ್ಲಿಂ ಗರ್ಭಿಣಿ ಮಹಿಳೆಗೆ ರಕ್ತ ನೀಡಿ ಜೀವ ಉಳಿಸಿದ ಹಿಂದು ಯುವಕ – ಕಹಳೆ ನ್ಯೂಸ್

ಮೂಡಬಿದಿರೆಹಿಂದು ಯುವಕನೋರ್ವ ಗರ್ಭಿಣಿ ಮುಸ್ಲಿಂ ಮಹಿಳೆಯ ಜೀವ ಉಳಿಸಿದ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ.

ಯೋಗೇಶ್ ಕೊಡ್ಯಡ್ಕ ಮಾನವೀಯತೆ ಮೆರೆದ ಹಿಂದು ಯುವಕ ಎಂದು ಗುರುತಿಸಲಾಗಿದೆ.ನಗರದ ಜಿ.ಎ. ಆಸ್ಪತ್ರೆಯಲ್ಲಿದ್ದ ಗರ್ಭಿಣಿ ಫಾತಿಮಾ ಅವರಿಗೆ ಹೆರಿಗೆ ಸಂದರ್ಭದಲ್ಲಿ ತುರ್ತಾಗಿ  ಒಂದು ಯೂನಿಟ್ ರಕ್ತದ ಅವಶ್ಯಕತೆ ಇದೆ ಎಂದು ವೈದ್ಯರು ಕುಟುಂಸ್ಥರಿಗೆ ತಿಳಿಸಿದ್ದರು. ಅಗತ್ಯವಿದ್ದ ರಕ್ತ ಸಂಗ್ರಹಿಸಲಾಗದೆ ಕಂಗಾಲಾಗಿದ್ದ ವೇಳೆ ಮೂಡಬಿದ್ರೆ ಬ್ಲಡ್ ಬ್ಯಾಂಕ್ ಈ ಬಗ್ಗೆ ರಕ್ತದಾನಿಗಳಿಗೆ ಮಾಹಿತಿ ನೀಡಿ ಮನವಿ ಮಾಡಿಕೊಂಡಿತ್ತು. ಆದರೆ ರಾತ್ರಿ ಸುಮಾರು 12ರವರೆಗೂ ರಕ್ತ ಪೂರೈಕೆ ಆಗದಿದ್ದರಿಂದ ಗರ್ಭಿಣಿ ಮಹಿಳೆಯ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊನೆಗೆ ಕನೆಕ್ಟ್ ಮೂಡಬಿದ್ರೆ ಅಪ್ಲಿಕೇಶನ್ ಗೆ ಮಾಹಿತಿ ನೀಡಿದಾಗ ಸುದ್ದಿ ತಿಳಿದು ಬೆಳಗ್ಗೆ 5ಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ ಯೋಗೇಶ್ ಕೊಡ್ಯಡ್ಕ  ಗರ್ಭಿಣಿಗೆ ರಕ್ತ ದಾನ ಮಾಡುವ ಮೂಲಕ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ