Recent Posts

Sunday, September 22, 2024
ಪುತ್ತೂರು

ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದಲ್ಲಿ ವಿವಿಧ ಕ್ಲಬ್‍ಗಳ ಉದ್ಘಾಟನೆ- ಕಹಳೆ ನ್ಯೂಸ್

ಪುತ್ತೂರು : ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇಯಲ್ಲಿ ವಿದ್ಯಾಲಯದ ವಿವಿಧ ಕ್ಲಬ್‍ಗಳ ಉದ್ಘಾಟನೆ ಮಾಡಿ ಮಾತನಾಡಿದ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ಆಂಗ್ಲ ಉಪನ್ಯಾಸಕ ರಾಮಚಂದ್ರ ಭಟ್, ಒಬ್ಬ ವ್ಯಕ್ತಿಯ ದೇಹದಲ್ಲಿರುವ ಅಂಗಗಳು ಅವನಿಗೆ ಹೇಗೆ ಸಹಕರಿಸುತ್ತವೆ ಎನ್ನುವುದರ ಮೇಲೆ ಅವನ ಪ್ರಗತಿಯಾಗುತ್ತದೆ. ಹಾಗೆಯೇ ವಿದ್ಯಾಸಂಸ್ಥೆಯಲ್ಲ್ಲಿ ಕಾರ್ಯನಿರ್ವಹಿಸುವ ವಿವಿಧ ಕ್ಲಬ್‍ಗಳು ನಿರ್ವಹಿಸುವ ಕೆಲಸದ ಆಧಾರದ ಮೇಲೆ ವಿದ್ಯಾರ್ಥಿಯ ಕ್ರಿಯಾಶೀಲತೆ ಉತ್ಕøಷ್ಟಗೊಳ್ಳುತ್ತದೆ. ಕ್ಲಬ್‍ಗಳು ನಡೆಸುವ ಚಟುವಟಿಕೆಗಳು ಸೃಜನಾತ್ಮಕವಾಗಿರಬೇಕು ಹಾಗೂ ಕೌಶಲ್ಯಯುತವಾಗಿರಬೇಕು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವಿಧ ರೀತಿಯ ಕ್ಲಬ್‍ಗಳನ್ನು ಮಾಡುವುದರಿಂದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ, ಎಲ್ಲರಿಗೂ ತಮ್ಮ ಪ್ರತಿಭೆಗಳನ್ನು ತೋರಿಸಲು ಸದವಕಾಶ ದೊರೆಯುತ್ತದೆ. ಮಕ್ಕಳಿಗೆ ಸೂಕ್ತ ವೇದಿಕೆ ಸಿಕ್ಕಿದಂತಾಗುತ್ತದೆ. ವಿದ್ಯಾರ್ಥಿಯ ಪ್ರಗತಿಯು ಗುರುವಿನ ಮೂಲಕ, ಸ್ವ ಜ್ಞಾನದ ಮೂಲಕ, ಸಹಪಾಠಿಗಳ ಮೂಲಕ ಹಾಗೂ ಗೆಳೆಯರ ಮೂಲಕ ಸಾಧ್ಯವಾಗುತ್ತದೆ ಎಂದರಲ್ಲದೆ ಅಂಬಿಕಾ ವಿದ್ಯಾಲಯದಲ್ಲಿ ಎಲ್ಲವನ್ನೂ ಸಂಪ್ರದಾಯಪದ್ಧವಾಗಿ ಕಲಿಸಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಅಮಾನವೀಯ ಘಟನೆ : ಮಗು ಬೇಡ ಎಂದು ಮುಳ್ಳಿನ ಪೊದೆಗೆ ಎಸೆದ ದಂಪತಿಗಳು – ಮುಳ್ಳಿನ ಪೊದೆಯಲ್ಲಿ ವಿಲವಿಲ ಒದ್ದಾಡಿದ 7 ದಿನದ ಹೆಣ್ಣು ನವಜಾತ ಶಿಶು..!

ಜಾಹೀರಾತು

ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಯೊಬ್ಬರಲ್ಲಿಯೂ ಪ್ರತಿಭೆ ಇದೆ. ಅದ್ಭುತವಾದ ಶಕ್ತಿ ಇದೆ. ಆದರೆ ಅದು ಸುಪ್ತವಾಗಿದೆ. ಮಕ್ಕಳು ಸಿಕ್ಕಿದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅವರವರ ಪ್ರತಿಭೆ, ಶಕ್ತಿಗನುಸಾರವಾಗಿ ಆಯಾ ಕ್ಷೇತ್ರದಲ್ಲಿ ಮುಂದುವರಿಯಲು ಶಾಲೆಯಲ್ಲಿ ನಡೆಸುವ ಕ್ಲಬ್‍ಗಳು ಸಹಕಾರಿಯಾಗುತ್ತವೆ. ಈ ನಿಟ್ಟಿನಲ್ಲಿ ಸಾಹಿತ್ಯ, ವಿಜ್ಞಾನ, ಕ್ರೀಡೆ ಹಾಗೂ ಕಲಾ ಕ್ಲಬ್‍ಗಳನ್ನು ಮಾಡಲಾಗಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಭಾರತವು ಸಂಸ್ಕಾರ ಸಂಸ್ಕøತಿಗೆ ಹೆಸರುವಾಸಿಯಾದ ದೇಶವಾಗಿದೆ. ವಿಭಿನ್ನ ಸಂಸ್ಕೃತಿಯ ಜನರು ನಮ್ಮ ದೇಶದಲ್ಲಿ ವಾಸಿಸುತ್ತಿದ್ದಾರೆ. ನಮ್ಮ ಬದುಕನ್ನು ರೂಪಿಸುವ ವಿವಿಧ ಕಲೆಗಳಲ್ಲಿ ಪ್ರಾವೀಣ್ಯತೆ ಪಡೆದು ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ನಮ್ಮ ಹೆಸರು ಬೆಳೆಸುವಂತವರಾಗಬೇಕು. ಜೊತೆಗೆ ನಾನೊಬ್ಬ ಭಾರತೀಯ ಎಂಬುದನ್ನು ಧೈರ್ಯವಾಗಿ ಹೇಳುವಂತಹ ಮನೋಸ್ಥೈರ್ಯ ಪ್ರತಿಯೊಬ್ಬರಲ್ಲಿಯೂ ಬರಬೇಕು ಎಂದರು.

ಸಮಾರಂಭದಲ್ಲಿ ವಿದ್ಯಾಲಯದ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಅವನೀಶ್ ಆರ್ ಯು, ದಿವಿನ್ ಜಿ ಹೆಗ್ಡೆ ಹಾಗೂ ನಿಖಿಲ್ ಪ್ರಾರ್ಥಿಸಿ, ವಿದ್ಯಾರ್ಥಿನಿ ಚಂದನ ಸ್ವಾಗತಿಸಿದರು. ವಿದ್ಯಾರ್ಥಿನಿ ಖುಷಿ ನಿರ್ವಹಿಸಿ, ಭಾರ್ಗವಿ ಬೋರ್ಕರ್ ವಂದಿಸಿದರು.