Friday, November 22, 2024
ಪುತ್ತೂರುಶಿಕ್ಷಣಸುದ್ದಿ

ಸಂತಫಿಲೋಮಿನಾ ಕಾಲೇಜಿನಲ್ಲಿ ವಿಜ್ಞಾನದ ಪ್ರಸಾರಕ್ಕಾಗಿ ಸರಣಿ ವೆಬಿನಾರ್ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗವು ವಿಜ್ಞಾನದ ಪ್ರಸಾರಕ್ಕಾಗಿ ಸರಣಿ ವಿಜ್ಞಾನ ವೆಬಿನಾರ್ ಕಾರ್ಯಕ್ರಮವನ್ನು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿತು.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ|ಕೆ.ವಿ.ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ “ಪ್ರಸ್ತುತ ಸಂದರ್ಭದಲ್ಲಿ ವೆಬಿನಾರ್ ಮೂಲಕ ವಿಜ್ಞಾನ ಸಂವಹನವನ್ನು ಮಾಡುವ ಅಗತ್ಯವಿದೆ ಮತ್ತು ಇಂಥ ಕಾರ್ಯಕ್ರಮಗಳು ವಿಜ್ಞಾನದ ಕುರಿತು ಆಸಕ್ತಿ ಮೂಡಿಸುತ್ತವೆ” ಎಂದರು. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕುರಿತು ವಿವರಗಳನ್ನು ಕೂಡ ಅವರು ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸರಣಿ ವೆಬಿನಾರಿನಲ್ಲಿ ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ| ಎ.ಪಿ.ಭಟ್, ಉಜಿರೆಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಫೆÇ್ರ.ಟಿ.ಎನ್. ಕೇಶವ, ಪೂರ್ಣ ಪ್ರಜ್ಞ ಕಾಲೇಜಿನ ಭೌತ ಶಾಸ್ತ್ರ ಪ್ರಾಧ್ಯಾಪಕ ಅತುಲ್ ಭಟ್, ಮಂಗಳೂರು ವಿವಿಯ ಸಾಗರ ಭೂಗರ್ಭ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹೆಚ್. ಗಂಗಾಧರ ಭಟ್, ವಿಜ್ಞಾನಿ ಮತ್ತು ವಿಜ್ಞಾನ ಬರಹಗಾರ ಪೆÇ್ರ.ಪಾಲಹಳ್ಳಿ ವಿಶ್ವನಾಥ್ ಅವರು ಭಾಗವಹಿಸಿ ಬೇರೆ ಬೇರೆ ವಿಷಯಗಳ ಕುರಿತು ಉಪನ್ಯಾಸ ನೀಡಿದರು.ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ| ಎ.ಪಿ.ರಾಧಾಕೃಷ್ಣ ಮತ್ತು ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ| ದೀಪಕ್ ಡಿಸಿಲ್ವ ಅವರು ಕಾರ್ಯಕ್ರಮವನ್ನು ಸಂಘಟಿಸಿದರು.

ಶ್ರೀ ವಿಪಿನ್ ನಾಯಕ್, ಡಾ|ಆಶೀತ್, ಡಾ|ಪ್ರವೀಣ್ ಪ್ರಕಾಶ್ ಡಿಸೋಜ ಮತ್ತು ಡಾ|ಚಂದ್ರಶೇಖರ್ ಸಹಕರಿಸಿದರು.