Recent Posts

Sunday, September 22, 2024
ದಕ್ಷಿಣ ಕನ್ನಡಪುತ್ತೂರುಸಂತಾಪಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ರಾಮ ಭಟ್ ರವರಿಗೆ ನುಡಿನಮನ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಸಂಸ್ಥೆಗಳ ಸ್ಥಾಪನೆಗೆ ಮತ್ತು ಬೆಳವಣಿಗೆಗೆ ಬೆನ್ನೆಲುಬಾಗಿದ್ದ ಹಿರಿಯ ಮುತ್ಸದ್ದಿ ಬಿಜೆಪಿಯ ಭೀಷ್ಮ ಎಂದೇ ಪ್ರಖ್ಯಾತಿಯಾಗಿದ್ದ ರಾಮಭಟ್ ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಗೋಪಾಲಕೃಷ್ಣ ಭಟ್ ಎಂ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಉರಿಮಜಲು ರಾಮ ಭಟ್ಟರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ರಾಮ ಭಟ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಅವರು ಮಾತಾಡಿದರು.

ರಾಮ ಭಟ್ ರವರ ಪಕ್ಷನಿಷ್ಠೆ, ಪ್ರಾಮಾಣಿಕತೆ, ಹಿಂದುತ್ವ, ಉತ್ತಮ ವ್ಯಕ್ತಿತ್ವ , ತತ್ವಾದರ್ಶ, ಧೈರ್ಯ, ಸಾಹಸ ಎಲ್ಲರಲ್ಲಿಯೂ ಜೀವಂತವಾಗಿರಬೇಕು. ಇದುವೇ ನಾವೆಲ್ಲರೂ ಅವರಿಗೆ ನೀಡುವ ಶ್ರದ್ಧಾಂಜಲಿ. ಪುತ್ತೂರಿನ ಶಾಸಕರಾಗಿದ್ದ ಅವರು ಎಲ್ಲರಿಗೂ ಬೇಕಾದವರಾಗಿದ್ದು ಅಜಾತ ಶತ್ರು ಎನಿಸಿಕೊಂಡಿದ್ದರು. ತತ್ವ ಮತ್ತು ಸಿದ್ದಾಂತದ ಉಳಿವಿಗಾಗಿ ಹಗಲಿರುಳೂ ಶ್ರಮಿಸುತ್ತಿದ್ದರು ಎಂದರು.

ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥ ಪರಮೇಶ್ವರ ಶರ್ಮ ಮಾತನಾಡಿ ಜನರೊಂದಿಗೆ ಸ್ವಾಭಾವಿಕವಾಗಿ ಬೆರೆಯಬಲ್ಲವರಾಗಿ ನಿರಾಶೆಗೊಳಗಾದವರನ್ನು ಉದಾತ್ತ ದೃಷ್ಟಿಕೋನದತ್ತ ಕರೆದೊಯ್ದು ಅವರಲ್ಲಿ ಉನ್ನತ ಆದರ್ಶ ಮೂಡಿಸಬಲ್ಲ ಅಪರೂಪದ ವ್ಯಕ್ತಿ ರಾಮಭಟ್‍ರಾಗಿದ್ದರು. ಸಮಾಜದ ವಿವಿಧ ಸ್ತರಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ರಾಮ ಭಟ್ ರವರ ಯೋಚನೆಗಳು ಮತ್ತು ಯೋಜನೆಗಳು ಅನುಕರಣೀಯವಾಗಿದೆ. ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಸಂದರ್ಭದಲ್ಲಿ ಅನೇಕ ನಾಯಕರನ್ನು ಬೆಳೆಸಿದ ಕೀರ್ತಿ ಅವರದ್ದು. ಅಂತಹ ಮಹಾನ್ ನಾಯಕನ ಆತ್ಮವು ಭಗವಂತನಲ್ಲಿ ಲೀನವಾಗಲಿ ಎಂದು ನುಡಿದರು. ಅವರ ಆತ್ಮಕ್ಕೆ ಚಿರ ಶಾಂತಿಯನ್ನು ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆಯನ್ನು ನಡೆಸಲಾಯಿತು.

ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಕೃಷ್ಣ ಪ್ರಸಾದ ನಡುಸಾರು, ಸದಸ್ಯ ಕೆ.ಎನ್ ಸುಬ್ರಹ್ಮಣ್ಯ , ಪ್ರಾಂಶುಪಾಲ ಮಹೇಶ ನಿಟಿಲಾಪುರ , ವಿಭಾಗ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಭೀಮ ಭಾರದ್ವಾಜ್ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ಅತಿಥಿಗಳು ಹಾಗೂ ವಿದ್ಯಾರ್ಥಿಗಳಿಂದ ರಾಮ ಭಟ್ಟರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು