Recent Posts

Sunday, January 19, 2025
ಸುದ್ದಿ

ಸದ್ದುಮಾಡಲು ಸಿದ್ಧವಾಗಿದೆ ತ್ರಿಶೂಲ್ ಫ್ರೆಂಡ್ಸ್(ರಿ); ಕ್ರೀಡಾಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ ತ್ರಿಶೂಲ್ ಟ್ರೋಫಿ ಇದರ ಸೀಸನ್4 ನ ಪೋಸ್ಟರ್- ಕಹಳೆ ನ್ಯೂಸ್

ಪುತ್ತೂರು : ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿರುವ ಯುವ ತರುಣರ ತಂಡವಾದ ತ್ರಿಶೂಲ್ ಫ್ರೆಂಡ್ಸ್(ರಿ) ಪುತ್ತೂರು 2022ರ ಹೊಸತನದಲ್ಲಿ ವಿಶೇಷವಾದ ಟುರ್ನಿಮೆಂಟ್ ಆಯೋಜನೆ ಮಾಡಲು ಸಜ್ಜಾಗಿದೆ.

3 ವರ್ಷಗಳಿಂದ ಸತತವಾಗಿ ಪಂದ್ಯಾಟವನ್ನ ಆಯೋಜಿಸಿಕೊಂಡು, ಹತ್ತೂರಿಗೂ ತ್ರಿಶೂಲ್ ಟ್ರೋಫಿ ಮೂಲಕ ಹಲವಾರು ಕ್ರೀಡಾಪಟುಗಳಿಗೆ ಪ್ರೋತ್ಸಾಹವನ್ನ ನೀಡಿಕೊಂಡು ಪಂದ್ಯಾಟವನ್ನ ಆಯೋಚಿಸುತ್ತಿದ್ದ ತ್ರಿಶೂಲ್ ಫ್ರೆಂಡ್ಸ್(ರಿ) ಪುತ್ತೂರು ತಂಡ, 2022ರಲ್ಲಿ ಪಂದ್ಯಾಟವನ್ನ ಆಯೋಜಿಸಲು ಸಿದ್ದವಾಗಿದ್ದು ತ್ರಿಶೂಲ್ ಟ್ರೋಪಿ ಕಮಿಂಗ್ ಸೂನ್ ಅನ್ನೋ ಪ್ರೋಸ್ಟರ್ ರಿಲೀಸ್ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆ ಒಂದು ವರ್ಷ ಕಬಡ್ಡಿ ಹಾಗೂ ಎರಡು ವರ್ಷ ಕ್ರಿಕೇಟ್ ಪಂದ್ಯಾಟವನ್ನ ಆಯೋಚಿಸಿ ಯಶಸ್ವಿಯಾಗಿದೆ. ಹಲವು ಕುತೂಹಲಗಳೊಂದಿಗೆ ಯುವಕರ ತಂಡ ಪಂದ್ಯಾಟವನ್ನ ಆಯೋಚನೆ ಮಾಡೋದೆ ವಿಶೇಷವಾಗಿದೆ.
ಇನ್ನು ಯಾವುದೇ ಜಾತಿ-ಧರ್ಮ-ಪಕ್ಷಕ್ಕೆ ಸೀಮಿತಗೊಳ್ಳದೆ ಉತ್ಸಾಹಿ ಯುವಕರನ್ನೊಳಗೊಂಡ ಈ ತ್ರಿಶೂಲ್ ಫ್ರೆಂಡ್ಸ್ ಸಂಘಟನೆಯು, ರಕ್ತದಾನ ಶಿಬಿರ, ಅಶಕ್ತರ ಪಾಲಿಗೆ ನೆರವಾಗುವ ನಿಟ್ಟಿನಲ್ಲಿ ಪ್ರಜ್ಞಾ ಸೇವಾ ಕೇಂದ್ರಕ್ಕೆ ಭೇಟಿ ನೀಡಿ, ನೆರವು ನೀಡುವ ಮೂಲಕ ಸಹಾಯಹಸ್ತ ಮುಂತಾದ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಮಾನವೀಯತೆಯನ್ನು ತೋರ್ಪಡಿಸಿ ಮೆಚ್ಚುಗೆಗೆ ಪಾತ್ರವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿ ವರ್ಷ ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ಪಂದ್ಯಾಟವನ್ನ ಆಯೋಜಿಸಿ ಎಲ್ಲರನ್ನ ರಂಜಿಸುತ್ತಿದ್ದ ತ್ರಿಶೂಲ್ ಫ್ರೆಂಡ್ಸ್ ತಂಡ ಕೇವಲ ‘ತ್ರಿಶೂಲ್ ಟ್ರೋಫಿ ೨೦೨೨ ಅತೀ ಶೀಘ್ರದಲೆ’್ಲ ಎಂಬ ಪೊಸ್ಟರ್ ರಿಲೀಸ್ ಮಾಡಿ ಕುತೂಲಹವನ್ನ ಹೆಚ್ಚಿಸಿದೆ. ಈ ಭಾರಿ ಯಾವ ಪಂದ್ಯಾಟವನ್ನ, ಯಾವ ದಿನದಂದು ಆಯೋಜಿಸಲಾಗುತ್ತೆ..? ಯಾರೆಲ್ಲ ಗಣ್ಯರು ಭಾಗಿಯಾಗಲಿದ್ದಾರೆ..? ಈ ಭಾರಿ ಯಾವ ಕುತೂಹಲದ ವಿಚಾರವನ್ನ ತ್ರಿಶೂಲ್ ಫೆಂಡ್ಸ್ ತಂಡ ಹೊತ್ತು ತರುತ್ತೆ ಅನ್ನೋ ಕುತೂಹಲ ಜನರಲ್ಲಿ ಹೆಚ್ಚಿಸುವಂತೆ ಮಾಡಿದೆ.