Recent Posts

Sunday, November 10, 2024
ಸುದ್ದಿ

ಕರಾವಳಿಯಲ್ಲಿಲ್ಲ ನಿಫಾ ನಿರಾತಂಕವಾಗಿರಿ ವೈರಸ್, ವದಂತಿಗಳನ್ನು ನಂಬಬೇಡಿ – ಜಿಲ್ಲಾಧಿಕಾರಿ ಸೆಂಥಿಲ್

ಮಂಗಳೂರು : ಕರಾವಳಿಯಲ್ಲಿ ನಿಫಾ ವೈರಸ್ ಪತ್ತೆಯಾಗಿಲ್ಲ, ಜನರು ಭಯಪಡಬೇಕಾಗಿಲ್ಲ ಎಂದು ದ,ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಮೇ ೨೪ ರ ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ನಗರಕ್ಕೆ ಚಿಕಿತ್ಸೆಗಾಗಿ ಬಂದಿದ್ದ ಕಲ್ಲಿಕೋಟೆಯ ವೈದ್ಯಕೀಯ ಕಾಲೇಜಿನ ಸಿಬ್ಬಂದಿಯಾಗಿದ್ದ ಕಾರಣ ಅನುಮಾನದ ಮೇರೆಗೆ ಹಾಗೂ ಇನ್ನೊಬ್ಬ ರೋಗಿಯ ಕಫದ ಮಾದರಿಯನ್ನು ತಪಾಸಣೆಗಾಗಿ ಕಳುಹಿಸಲಾಗಿತ್ತು. ಆದರೆ ಇದೀಗ ವರದಿ ದೊರಕಿದ್ದು, ಜಿಲ್ಲೆಯಲ್ಲಿ ಯಾರಿಗೂ ವೈರಸ್ ತಗುಲಿಲ್ಲ ಎಂದು ಸ್ಪಷ್ಟಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇರಳದ ಕಲ್ಲಿಕೋಟೆಯಲ್ಲಿ ನಿಫಾ ಸೋಂಕು ಪತ್ತೆಯಾಗಿದ್ದು, ಇತರರಿಗೆ ಹರಡದಂತೆ, ಅಲ್ಲಿ ಸೂಕ್ತ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಈ ಸೋಂಕು ಗಾಳಿಯಲ್ಲಿ ಹರಡುವುದಿಲ್ಲ. ರೋಗಿಯ ಸಮೀಪದ ಸಂಪರ್ಕದಿಂದ ಮಾತ್ರ ಹರಡುತ್ತದೆ. ಬಾವಿಯ ನೀರಿನಿಂದಲೂ ಈ ರೋಗ ಹರಡುವುದಿಲ್ಲ . ಹಣ್ಣು ಹಂಪಲು ತಿನ್ನಲು ಭಯಪಡಬೇಕಾಗಿಲ್ಲ. ಆದರೆ ಪ್ರಾಣಿ ಪಕ್ಷಿಗಳು ತಿಂದಿರುವ ಹಣ್ಣುಗಳನ್ನು, ಸೇವಿಸಬೇಡಿ. ಉಳಿದಂತೆ ಸಾರ್ವಜನಿಕರು ಆಹಾರ ಪದಾರ್ಥಗಳನ್ನು ಸೇವಿಸುವಾಗ ಸ್ವಚ್ಚತೆಗೆ ಗಮನ ನೀಡುವುದು ಆರೋಗ್ಯಕ್ಕೆ ಉತ್ತಮ. ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ವದಂತಿ ಸುದ್ದಿಗಳು ಹರಡುತ್ತಿದ್ದು ಇದನ್ನು ನಂಬಬೇಡಿ. ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು