Recent Posts

Tuesday, January 21, 2025
ಪುತ್ತೂರು

ನಾಳೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ನೇತೃತ್ವದಲ್ಲಿ ಹಾಗೂ ಕ್ಯಾಂಪ್ಕೂ ಇನ್ ಸೇವಾ ಇದರ ಸಹಬಾಗಿತ್ವದಲ್ಲಿ, ಕೆಮ್ಮಿಂಜೆ ಗ್ರಾಮದ ನೈತಾಡಿಯಲ್ಲಿ ನಿರ್ಮಿಸಿಕೊಟ್ಟಿರುವ ನೂತನ ಮನೆಯ ಗೃಹಪ್ರವೇಶ ಹಾಗೂ ಗೃಹ ಹಸ್ತಾಂತರ ಕಾರ್ಯಕ್ರಮ-ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ನೇತೃತ್ವದಲ್ಲಿ ಹಾಗೂ ಕ್ಯಾಂಪ್ಕೂ ಇನ್ ಸೇವಾ ಇದರ ಸಹಬಾಗಿತ್ವದಲ್ಲಿ, ಕೆಮ್ಮಿಂಜೆ ಗ್ರಾಮದ ನೈತಾಡಿಯಲ್ಲಿ ನಿರ್ಮಿಸಿಕೊಟ್ಟಿರುವ ನೂತನ ಮನೆಯ ಗೃಹಪ್ರವೇಶ ಹಾಗೂ ಗೃಹ ಹಸ್ತಾಂತರ ಕಾರ್ಯಕ್ರಮ ಡಿಸೆಂಬರ್ ೧೧ರಂದು ವಜ್ರದೇಹಿ ಮಠ ಗುರುಪುರ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮಿಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ, ರಾಷ್ಟ್ರೀಯ ಸ್ವಯಂ ಸಂಘ ಕಾರ್ಯಕಾರಿಣಿ ಸದಸ್ಯರಾದ ಡಾ.ಕಲ್ಲಡ್ಕ ಪ್ರಭಾಕರ್ ಭಟ್, ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಧ್ಯಕ್ಷರಾದ ಡಾ.ಎಂ.ಬಿ ಪುರಾಣಿಕ್, ವಿಶ್ವ ಹಿಂದೂ ಪರಿಷತ್ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜು,ರಾಷ್ಟ್ರೀಯ ಸ್ವಯಂ ಸಂಘ ಪ್ರಾಂತ ಸಹ ಸೇವಾ ಪ್ರಮುಖ್ ನಾ.ಸೀತಾರಾಮ, ಕ್ಯಾಂಪ್ಕೋ ಅಧ್ಯಕ್ಷರು ಕಿಶೋರ್ ಕುಮಾರ್ ಕೊಡ್ಗಿ , ಪುತ್ತೂರು ನಗರಸಭೆ ಅಧ್ಯಕ್ಷರು ಜೀವಂಧರ್ ಜೈನ್, ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು