Tuesday, January 21, 2025
ದಕ್ಷಿಣ ಕನ್ನಡಸುದ್ದಿ

ಮಂಗಳೂರು: ಪ್ರೀತಿ ನಿರಾಕರಿಸಿದಕ್ಕಾಗಿ  ಯುವತಿ ಮೇಲೆ ಅತ್ಯಾಚಾರ : ಆರೋಪಿ ಎ .ಅಬೂಬಕರ್ ಸಿದ್ದೀಕ್ ಬಂಧನ- ಕಹಳೆ ನ್ಯೂಸ್

ಮಂಗಳೂರು : ಪ್ರೀತಿಸಲು ನಿರಾಕರಿಸಿದಕ್ಕಾಗಿ ಸಹಪಾಠಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ಬಜಪೆಯಲ್ಲಿ ನಡೆದಿದೆ.
ಬಜಪೆ ಶನೈಶ್ಚರ ದೇವಸ್ಥಾನ ಸಮೀಪದ ಎ .ಅಬೂಬಕರ್ ಸಿದ್ದೀಕ್ (21) ಬಂಧಿತ ಆರೋಪಿ.

ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಅನ್ಯಧರ್ಮ ಸೇರಿದ ಯುವತಿಗೆ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದನಲ್ಲದೆ, ಕಾಲೇಜಿನಲ್ಲಿ 2019ರಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಇಬ್ಬರು ಜತೆಯಾಗಿ ತೆಗೆಸಿಕೊಂಡಿದ್ದ ಪೋಟೋವನ್ನು ಯುವತಿಗೆ ತೋರಿಸಿ ಪ್ರೀತಿ ಮಾಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹಾಕಿ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದನು. ಇದನ್ನು ಓದಿ: ಹಿಂದೂ ಯುವತಿ ಜೊತೆ ಇದ್ದ ಮುಸ್ಲಿಂ ಯುವಕನ ಮೇಲೆ ಅಡ್ಯಾರುಪದವು ಬಳಿ ತಲವಾರು ದಾಳಿ

ಜಾಹೀರಾತು
ಜಾಹೀರಾತು
ಜಾಹೀರಾತು

ಡಿ.8 ರಂದು ಸಂಜೆ ಯುವತಿ ಕೆಲಸ ಮುಗಿಸಿ ಮನೆಗೆ ವಾಪಾಸಾದಾಗ ಆರೋಪಿ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು