ದೇಶ ಭಕ್ತ ಬಜರಂಗಿಗಳಿಗಾಗಿ ಡಿ.12 ರಂದು ಜೈ ಜೈ ಜೈ ಭಜರಂಗಿ ಆಡಿಯೋ ಬಿಡುಗಡೆ- ಕಹಳೆ ನ್ಯೂಸ್
ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಕಳ ಹಿಂದೂ ಸಂಗಮದಲ್ಲಿ ಎಲ್ಲಾ ದೇಶ ಭಕ್ತ ಬಜರಂಗಿಗಳಿಗಾಗಿ ಡಿ12 ರಂದು ಮಧ್ಯಾಹ್ನ 2 ಗಂಟೆಯಿಂದ ದೇಶ ಭಕ್ತಿಗೀತೆಗಳ ಸಂಗೀತ ಕಾರ್ಯಕ್ರಮ ನೆರವೇರಲಿದೆ.
ಕಾರ್ಯಕ್ರಮದಲ್ಲಿ ತುಳುನಾಡ ಗಾನಗಂಧರ್ವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪುತ್ತೂರು ಜಗದೀಶ್ ಆಚಾರ್ಯ ಹಾಡಿರುವ ‘ನಮ್ಮುಸಿರು ಭಾರತಿಗಾಗಿ, ತ್ರಾಣವದೋ ಗೋ ಮಾತೆಗಾಗಿ, ಬದುಕು ಹಿಂದುತ್ವಕ್ಕಾಗಿಯೇ, ಜೈ ಜೈ ಜೈ ಭಜರಂಗಿ’ ಆಡಿಯೋ ಸಾಂಗ್ ಬಿಡುಗಡೆಯಾಗಲಿದೆ. ತುಳುವ ಬೊಳ್ಳಿ ದಯಾನಂದ ಕತ್ತಲ್ ಸಾರ್ ಸಾಹಿತ್ಯಕ್ಕೆ, ಜಗದೀಶ್‍ರವರ ಸಂಗೀತ ನಿರ್ದೇಶನವಿದ್ದು, ಗಣೇಶ್ ಕುಳಾಯಿ, ರಾಜೇಶ್ ದಿಲ್ಸೆ, ವರುಣ್ ರಾಜ್‍ರವರು ಸಹ ಗಾಯಕರಾಗಿ ಧ್ವನಿ ನೀಡಿದ್ದಾರೆ.