Recent Posts

Tuesday, January 21, 2025
ರಾಷ್ಟ್ರೀಯಹೆಚ್ಚಿನ ಸುದ್ದಿ

21 ವರ್ಷದ ಬಳಿಕ ಮಿಸ್ ಯೂನಿವರ್ಸ್ ಪಟ್ಟ ಪಡೆದುಕೊಂಡ ಭಾರತದ ಬೆಡಗಿ- ಕಹಳೆ ನ್ಯೂಸ್

ನವದೆಹಲಿ: ಇಸ್ರೇಲ್‍ನ ಐಲಾಟ್‍ನಲ್ಲಿ ನಡೆದ 70 ನೇ ಮಿಸ್ ಯೂನಿವರ್ಸ್ – 2021 ಕಿರೀಟವನ್ನು ಭಾರತದ ಹರ್ನಾಜ್ ಸಂಧು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

2000ರಲ್ಲಿ ಲಾರಾ ದತ್ತಾ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದ ಬಳಿಕ ಸುಮಾರು 21 ವರ್ಷಗಳ ನಂತರ ಹರ್ನಾಜ್ ಸಂಧು ಮತ್ತೊಮ್ಮೆ ಭಾರತಕ್ಕೆ ಕಿರೀಟವನ್ನು ತಂದುಕೊಟ್ಟಿದ್ದಾರೆ .

ಚಂಡೀಗಢದ ಹರ್ನಾಜ್ ಸಂಧು 2021 ರ ವಿಶ್ವ ಸುಂದರಿ ಆಗಿ ಹೊರಹೊಮ್ಮಿದ್ದು, ಜಾಗತಿಕವಾಗಿ ಲೈವ್-ಸ್ಟ್ರೀಮ್‍ನಲ್ಲಿ ನಡೆದ ಈವೆಂಟ್‍ನಲ್ಲಿ ಮೆಕ್ಸಿಕೊದ ಮಾಜಿ ವಿಶ್ವ ಸುಂದರಿ 2020ರ ಆಂಡ್ರಿಯಾ ಮೆಜಾ ಅವರು ಭಾವನಾತ್ಮಕವಾಗಿ ಹರ್ನಾಜ್ ಸಂಧು ಅವರಿಗೆ ಕಿರೀಟವನ್ನು ತೊಡಿಸಿದ್ದಾರೆ.

ವೃತ್ತಿಯಲ್ಲಿ ಮಾಡೆಲ್ ಆಗಿರುವ ಹರ್ನಾಜ್ ಸಂಧು ತಮ್ಮ ಆರಂಭಿಕ ಶಿಕ್ಷಣವನ್ನು ಚಂಡೀಗಢದ ಶಿವಾಲಿಕ್ ಪಬ್ಲಿಕ್ ಸ್ಕೂಲ್‍ನಲ್ಲಿ ಮಾಡಿದ್ದು, ಬಳಿಕ ಚಂಡೀಗಢದಲ್ಲಿಯೇ ಪದವಿ ಪಡೆದ ನಂತರ ಪ್ರಸ್ತುತ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದಾರೆ.

ಚಂಡೀಗಢದ ಮಾಡೆಲ್ ಹರ್ನಾಜ್ ಸಂಧು ತಮ್ಮ ವೃತ್ತಿಜೀವನದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದು, 2017 ರಲ್ಲಿ ಟೈಮ್ಸ್ ಫ್ರೆಶ್ ಫೇಸ್ ಮಿಸ್ ಚಂಡೀಗಢ, 2018 ರಲ್ಲಿ ಮಿಸ್ ಮ್ಯಾಕ್ಸ್ ಎಮಜಿರ್ಂಗ್ ಸ್ಟಾರ್, 2019 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಪಂಜಾಬ್ ಮತ್ತು 2021 ರಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ ಕೂಡಾ ಸೇರಿವೆ.