Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ತ್ರಿಶೂಲ್ ಫ್ರೆಂಡ್ಸ್ ರಿ.ನ 4ನೇ ವರ್ಷದ ಸಂಭ್ರಮದ ಅಂಗವಾಗಿ ನಾಳೆ ತಂಡದ ಸದಸ್ಯರಿಂದ ರಕ್ತದಾನ – ಕಹಳೆ ನ್ಯೂಸ್

ಪುತ್ತೂರು : ತ್ರಿಶೂಲ್ ಫ್ರೆಂಡ್ಸ್ ರಿ. ಯಶಸ್ವಿಯಾಗಿ 4ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿರುವ ತ್ರಿಶೂಲ್ ಫ್ರೆಂಡ್ಸ್ ರಿ. 4ನೇ ವರ್ಷದ ಸಂಭ್ರಮಕ್ಕೆ, ನಾಳೆ ರೋಟರಿ ಬ್ಲಡ್ ಬ್ಯಾಂಕ್‍ನಲ್ಲಿ, ತ್ರಿಶೂಲ್ ಫ್ರೆಂಡ್ಸ್ ರಿ. ತಂಡದ ಸದಸ್ಯರಿಂದ ರಕ್ತದಾನ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಯುವ ತರುಣರ ತಂಡವಾದ ತ್ರಿಶೂಲ್ ಫ್ರೆಂಡ್ಸ್(ರಿ) ಪುತ್ತೂರು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಯಾವುದೇ ಜಾತಿ-ಧರ್ಮ-ಪಕ್ಷಕ್ಕೆ ಸೀಮಿತಗೊಳ್ಳದೆ, ಉತ್ಸಾಹಿ ಯುವಕರನ್ನೊಳಗೊಂಡ ಈ ತ್ರಿಶೂಲ್ ಫ್ರೆಂಡ್ಸ್ ಸಂಘಟನೆಯು, ರಕ್ತದಾನ ಶಿಬಿರ ಮಾತ್ರವಲ್ಲದೆ, ಅಶಕ್ತರ ಪಾಲಿಗೆ ನೆರವಾಗುವ ನಿಟ್ಟಿನಲ್ಲಿ ಪ್ರಜ್ಞಾ ಸೇವಾ ಕೇಂದ್ರಕ್ಕೆ ಭೇಟಿ ನೀಡಿ, ನೆರವು ನೀಡುವ ಮೂಲಕ ಸಹಾಯಹಸ್ತ ಮುಂತಾದ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಮಾನವೀಯತೆಯನ್ನು ತೋರ್ಪಡಿಸಿ ಮೆಚ್ಚುಗೆಗೆ ಪಾತ್ರವಾಗಿದೆ

ಜಾಹೀರಾತು
ಜಾಹೀರಾತು
ಜಾಹೀರಾತು