Recent Posts

Tuesday, January 21, 2025
ದಕ್ಷಿಣ ಕನ್ನಡಸುದ್ದಿ

ವಾಮಂಜೂರು ನೀರುಮಾರ್ಗದಲ್ಲಿ ಹಲ್ಲೆ ಪ್ರಕರಣ: ನಿರಪರಾಧಿಗಳನ್ನು ಪೊಲೀಸ್ ಸ್ಟೇಷನ್ ನಿಂದ ಬಿಡಿಸಿ ಕರೆತಂದ ಶಾಸಕ ಭರತ್ ಶೆಟ್ಟಿ –ಕಹಳೆ ನ್ಯೂಸ್

ಮಂಗಳೂರು: ಇತ್ತೀಚೆಗೆ ವಾಮಂಜೂರು ಠಾಣಾ ವ್ಯಾಪ್ತಿಯ ನೀರುಮಾರ್ಗದಲ್ಲಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ, ಕೇಸು ದಾಖಲಿಸಿಕೊಂಡ ಪೊಲೀಸರು ಅಪರಾಧಿಗಳನ್ನು ಹಾಗೂ ಹಲವು ನಿರಪರಾಧಿಗಳನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಮಾಹಿತಿಯನ್ನು ಪಡೆದಕೊಂಡ ಮಂಗಳೂರು ಉತ್ತರದ ಶಾಸಕ ಡಾ. ವೈ. ಭರತ್ ಶೆಟ್ಟಿಯವರು ಖುದ್ದಾಗಿ ಪೊಲೀಸ್ ಠಾಣೆಗೆ ತೆರಳಿ ಅಧಿಕಾರಿಗಳೊಂದಿಗೆ ಮಾತುಕತೆ ಮಾಡಿ “ಅಪರಾಧಿಗಳ ವಿಚಾರಣೆಗೆ ಯಾರು ಅಡ್ಡಿಪಡಿಸುವುದಿಲ್ಲ ಆದರೆ ವಿನಾಕಾರಣ ನಿರಪರಾಧಿಗಳಿಗೆ ಶಿಕ್ಷೆಯಾಗುವುದು ಸರಿಯಲ್ಲ” ಎಂದರಲ್ಲದೆ ಈ ಪ್ರಕರಣದಲ್ಲಿ ಭಾಗಿಯಾಗದ ಯುವಕರ ಮೇಲೆ ಪ್ರಕರಣ ದಾಖಲಾಗದಂತೆ ನೋಡಿಕೊಂಡು ನಿರಪರಾಧಿಗಳನ್ನು ಬಿಡಿಸಿ ಕರೆತಂದಿದ್ದಾರೆ.

ಈ ಸಂದರ್ಭದಲ್ಲಿ ಶಾಸಕರ ಜೊತೆಗೆ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ, ಹಿಂದೂ ಜಾಗರಣ ವೇದಿಕೆಯ ಹರೀಶ್ ಮಟ್ಟಿ ಉಪಸ್ಥಿತರಿದ್ದರು.