Recent Posts

Tuesday, January 21, 2025
ಸುದ್ದಿ

ಬೆಳ್ತಂಗಡಿ: ದ್ವಿಚಕ್ರ ವಾಹನ ಹಾಗೂ ಕಾರು ನಡುವೆ ಅಪಘಾತ-ಕಹಳೆ ನ್ಯೂಸ್

ಬೆಳ್ತಂಗಡಿಯ ಸಂತೆಕಟ್ಟೆ ಬಳಿ ದ್ವಿಚಕ್ರ ವಾಹನ ಮತ್ತು
ಕಾರು ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ
ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮೃತ ಯುವಕನನ್ನು ಮಡಂತ್ಯಾರಿನ ಬಂಗೇರ ಕಟ್ಟೆ
ನಿವಾಸಿ ಯತಿನ್ ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದ್ವಿಚಕ್ರ ವಾಹನದಲ್ಲಿ ಇನ್ನೋರ್ವ ಸವಾರ ಪ್ರದೀಪ್ ಗೆ
ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ
ಪಾರಾಗಿದ್ದಾರೆ. ಯತಿನ್ ಗುರುವಾಯನಕೆರೆಯಲ್ಲಿ
ವೆಲ್ಲಿಂಗ್ ಶಾಪ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು
ತಿಳಿದುಬಂದಿದೆ.

ಇಂದು ಗೀತಾ ಜಯಂತಿ ಅಂಗವಾಗಿ ಮೇಲಂತಬೆಟ್ಟಿನ
ಕಿನ್ಯಮ್ಮ ಸಭಾಭವನದಲ್ಲಿ ಶೌರ್ಯ ಸಂಚಲನ
ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ
ಭಾಗವಹಿಸಿ, ಬೆಳ್ತಂಗಡಿ ಕಡೆಗೆ ಬರುತ್ತಿದ್ದಾಗ ಈ
ಅಪಘಾತ ಸಂಭವಿಸಿದೆ. ಕೂಡಲೇ ಯುವಕರನ್ನು
ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದಾರಿಮಧ್ಯೆ
ಯತಿನ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.