Recent Posts

Sunday, January 19, 2025
ಕ್ರೀಡೆದಕ್ಷಿಣ ಕನ್ನಡಮೂಡಬಿದಿರೆ

ತುಮಕೂರಿನ ಸಿದ್ಧಾರ್ಥ ಕಾಲೇಜು ಆವರಣದಲ್ಲಿ ನಡೆದ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ : ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಚಾಂಪಿಯನ್ ಶಿಪ್ ಪಟ್ಟ – ಕಹಳೆ ನ್ಯೂಸ್

ಬೆಂಗಳೂರು: ತುಮಕೂರು ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಯ ಸಹಯೋಗದಲ್ಲಿ ಗಾಂಧಿನಗರ ಸ್ಪೋರ್ಟ್ಸ್‌  ಕ್ಲಬ್ ಆಶ್ರಯದಲ್ಲಿ ತುಮಕೂರಿನ ಸಿದ್ಧಾರ್ಥ ಕಾಲೇಜು ಆವರಣದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ತಂಡವು ಭರತ್ ಸಾಯಿ ಕುಮಾರ್ ಸ್ಮಾರಕ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಪ್ರಶಸ್ತಿ ಗೆದ್ದುಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿದ್ಧಾರ್ಥ ಕಾಲೇಜು ಆವರಣದಲ್ಲಿ ನಡೆದ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ನ ಫೈನಲ್ ಹಣಾಹಣಿಯಲ್ಲಿ ಆಳ್ವಾಸ್ ತಂಡ ಬೆಂಗಳೂರಿನ ಬನಶಂಕರಿ ಸ್ಪೋರ್ಟ್ಸ್‌ ಕ್ಲಬ್ ವಿರುದ್ದ 35-22, 35-14ರಲ್ಲಿ ಜಯ ಗಳಿಸಿದೆ.

24 ತಂಡಗಳು ಭಾಗವಹಿಸಿದ್ದ ಲೀಗ್-ನಾಕೌಟ್ ಮಾದರಿಯ ಟೂರ್ನಿಯ ಸೆಮಿಫೈನಲ್‍ನಲ್ಲಿ ಆಳ್ವಾಸ್ ತಂಡ ಸಹ್ಯಾದ್ರಿ ಸ್ಪೋರ್ಟ್ಸ್‌ ಕ್ಲಬ್ ವಿರುದ್ಧ 35-21, 35-18ರಲ್ಲಿ ಮಣಿಸಿತು. ದ್ವಿತೀಯ ಸ್ಥಾನ ಪಡೆದ ಬನಶಂಕರಿ ತಂಡದವರು ಗಾಂಧಿನಗರ ಕ್ಲಬ್ ತಂಡವನ್ನು ಸೋಲಿಸಿದರು. ಗಾಂಧಿನಗರ ತಂಡವು ಮೂರನೇ ಸ್ಥಾನ ಗಳಿಸಿತು.

ಆಳ್ವಾಸ್ ನ ಚೇತನ್ ಅತ್ಯುತ್ತಮ ಫ್ರಂಟ್ ಪ್ಲೇಯರ್, ಬನಶಂಕರಿ ತಂಡದ ತರುಣ್ ಅತ್ಯುತ್ತಮ ಬ್ಯಾಕ್ ಪ್ಲೇಯರ್ ಹಾಗೂ ಗಾಂಧಿನಗರ ಕ್ಲಬ್‍ನ ಪ್ರದೀಪ್ ಅತ್ಯುತ್ತಮ ಸೆಂಟರ್ ಪ್ಲೇಯರ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.