Recent Posts

Sunday, January 19, 2025
ರಾಜಕೀಯ

Breaking News : ಕೈ ಜೊತೆ ಸೇರಿ ರೈತರಿಗೆ ಕೈ ಕೊಟ್ಟ ಕುಮಾರಸ್ವಾಮಿ ; ರೈತ ಆತ್ಮಹತ್ಯೆಗೆ ಶರಣು – ಕಹಳೆ ನ್ಯೂಸ್

ಬೆಳಗಾವಿ : ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರದ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿ, ಬಹುಮತ ಸಾಬೀತುಪಡಿಸಿ 24 ಗಂಟೆ ಕಳೆಯುವುದರೊಳಗೇ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ವರದಿಯಾಗಿದೆ. ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯದ ಉದ್ದಗಲಕ್ಕೂ ತಾನು ಮುಖ್ಯಮಂತ್ರಿಯಾದ ಇಪ್ಪತ್ತ್ನಾಲ್ಕು ಗಂಟೆ ಒಳಗಾಗಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು

ಇತ್ತ ಬಿಎಸ್ ಯಡಿಯೂರಪ್ಪನವರು ಕೂಡ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ಇಪ್ಪತ್ತ್ನಾಲ್ಕು ಗಂಟೆ ಒಳಗಾಗಿ ರಾಜ್ಯದ ಎಲ್ಲ ರೈತರ ಒಂದು ಲಕ್ಷದ ಒಳಗಿನ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಚುನಾವಣಾ ಫಲಿತಾಂಶ ಬಂದ ನಂತರ ಬಿ ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇನ್ನೇನು ಎರಡು ಮೂರು ದಿನಗಳಲ್ಲಿ ಸಾಲ ಮನ್ನಾ ಘೋಷಿಸುತ್ತೇನೆ ಎಂದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ದುರದೃಷ್ಟವಶಾತ್ ಯಡಿಯೂರಪ್ಪನವರ ಸರ್ಕಾರ ಬಿದ್ದು ಹೋಯಿತು. ಆ ನಂತರ ಎಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರು. ಅವರೂ ಕೂಡ ಭರವಸೆ ನೀಡಿದ್ದರಿಂದ ರೈತರು ಅವರ ಮೇಲೆ ನಂಬಿಕೆ ಇಟ್ಟಿದ್ದರು. ಆದರೆ ಎಚ್ ಡಿ ಕುಮಾರಸ್ವಾಮಿಯವರು ಸಾಲ ಮನ್ನಾ ಮಾಡಲು ಮೀನಾ ಮೇಷ ಎಣಿಸುತ್ತಿರುವುದರಿಂದ ರೈತರು ಆಘಾತಕ್ಕೊಳಗಾಗಿದ್ದಾರೆ. ಅದರ ಮೊದಲ ಪರಿಣಾಮವಾಗಿ ಬೆಳಗಾವಿಯಲ್ಲಿ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ಈ ದುರಾದೃಷ್ಟಕರ ಘಟನೆ ನಡೆದಿದೆ. ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ತಡವಾಗುತ್ತದೆ ಎಂದ ಕಾರಣ, ತಾನು ಮಾಡಿದ್ದ ಸಾಲ ಮನ್ನಾ ಆಗಲು ತಡವಾಗುತ್ತದೆ ಎಂದು ಬೇಸರಗೊಂಡು ರೈತ ಯಲ್ಲಪ್ಪ ವಂಟಗೂಡಿ( 48) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರೈತ ಯಲ್ಲಪ್ಪ ಕೃಷಿಗಾಗಿ ಲಕ್ಷಾಂತರ ಸಾಲ ಮಾಡಿದ್ದಾನೆಂದು ಸ್ಥಳಿಯರು ಹೇಳಿದ್ದಾರೆ. ಗೋಕಾಕ ಗ್ರಾಮೀಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ.