Recent Posts

Sunday, September 22, 2024
ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

ಮೊದಲ ಬಾರಿಗೆ ವಿಧಾನಪರಿಷತ್ ಗೆ ಮಂಜುನಾಥ್ ಭಂಡಾರಿ ; 2079 ಮತಗಳ ಮೂಲಕ ವಿಜಯಿಯಾದ ಸಹ್ಯಾದ್ರಿ ಸಚೇತಕ – ಕಹಳೆ ನ್ಯೂಸ್

ಮಂಗಳೂರು: ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಪೂರ್ಣ ಗೊಂಡಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ದ್ವಿ ಸದಸ್ಯ ಕ್ಷೇತ್ರದಿಂದ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಯ ಗಳಿಸಿದ್ದರೆ, ಇತ್ತ ಮೊದಲ ಬಾರಿಗೆ ವಿಧಾನಪರಿಷತ್ ಗೆ ಮಂಜುನಾಥ್ ಭಂಡಾರಿ ಪ್ರವೇಶ ಮಾಡಿದ್ದಾರೆ.


ದ.ಕ. ಜಿಲ್ಲೆಯ 231 ಹಾಗೂ ಉಡುಪಿ ಜಿಲ್ಲೆಯ 158 ಒಟ್ಟು 389 ಮತಗಟ್ಟೆಗಳಲ್ಲಿ 6013 ಮಂದಿ ಮತದಾನವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ 3697 ಮತಗಳನ್ನು ಪಡೆದು ಗೆಲುವು ಸಾಧಿಸಿ, ಮೂರನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ. ಹಾಗೂ ಮಂಜುನಾಥ ಬಂಡಾರಿಯವರು 2079 ಮತಗಳನ್ನು ಪಡೆದುಕೊಂಡಿದ್ದಾರೆ.

ಜಾಹೀರಾತು