Saturday, November 23, 2024
ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

ಸ್ವಚ್ಛ ಚಾರಿತ್ರ್ಯದ ಕೋಟ, ಭಂಡಾರಿ ವಿಧಾನ ಪರಿಷತ್ತಿಗೆ ; ” ವೆಂಕು ಪಣಂಬೂರಿಗೆ… ಕುಟ್ಟಿ ಕುಂದಾಪುರಕ್ಕೆ… ” ಎಸ್.ಡಿ.ಪಿ.ಐ‌‌. ಅಭ್ಯರ್ಥಿ ಶಾಫಿ, ಬೆಳ್ಳಾರೆಗೆ…! – ಕಹಳೆ ನ್ಯೂಸ್

ಮಂಗಳೂರು: ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಪೂರ್ಣ ಗೊಂಡಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ದ್ವಿ ಸದಸ್ಯ
ಕ್ಷೇತ್ರದಿಂದ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಯ ಗಳಿಸಿದ್ದರೆ, ಇತ್ತ ಮೊದಲ ಬಾರಿಗೆ ವಿಧಾನಪರಿಷತ್ ಗೆ ಮಂಜುನಾಥ್ ಭಂಡಾರಿ ಪ್ರವೇಶ ಮಾಡಿದ್ದಾರೆ.


ದ.ಕ. ಜಿಲ್ಲೆಯ 231 ಹಾಗೂ ಉಡುಪಿ ಜಿಲ್ಲೆಯ 158 ಒಟ್ಟು 389 ಮತಗಟ್ಟೆಗಳಲ್ಲಿ 6013 ಮಂದಿ ಮತದಾನವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ 3697 ಮತಗಳನ್ನು ಪಡೆದು ಗೆಲುವು ಸಾಧಿಸಿ, ಮೂರನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ. ಹಾಗೂ ಮಂಜುನಾಥ ಬಂಡಾರಿಯವರು 2079 ಮತಗಳನ್ನು ಪಡೆದುಕೊಂಡಿದ್ದಾರೆ. ಹಾಗೂ ಎಸ್.ಡಿ.ಪಿ.ಐ. ಅಭ್ಯರ್ಥಿ ಶಾಫಿ ಸೋತು ಸುಣ್ಣವಾಗಿದ್ದು, 204 ಮತ ಪಡೆದಿದ್ದಾರೆ. ಅಲ್ಲಿಗೆ ಸ್ವಚ್ಛ ಚಾರಿತ್ರ್ಯದ ಕೋಟ, ಭಂಡಾರಿ ವಿಧಾನ ಪರಿಷತ್ತಿಗೆ, ” ವೆಂಕು ಪಣಂಬೂರಿಗೆ… ಕುಟ್ಟಿ ಕುಂದಾಪುರಕ್ಕೆ… ” ಎಸ್.ಡಿ.ಪಿ.ಐ‌‌. ಅಭ್ಯರ್ಥಿ ಶಾಫಿ, ಬೆಳ್ಳಾರೆಗೆ…! ಎಂದು ಜನ ಆಡಿಕೊಳ್ಳುವಂತಾಗಿದೆ.