Sunday, January 19, 2025
ಕೊಡಗುಸಂತಾಪಸುದ್ದಿ

ಪೊಲೀಸ್ ಸೇವೆಯಿಂದ ನಿವೃತ್ತಿ ಪಡೆಯುವ ಒಂದು ತಿಂಗಳ ಮುಂಚೆಯೇ ಕೊನೆಯುಸಿರೆಳೆದ ಮಡಿಕೇರಿಯ ಎಸ್.ಐ.ಚಿನ್ನಪ್ಪ ನಾಯ್ಕ- ಕಹಳೆ ನ್ಯೂಸ್

ಕಡಬ: ಮಡಿಕೇರಿಯಲ್ಲಿ ಎಸ್.ಐ.ಯಾಗಿ ಸೇವೆ ಸಲ್ಲಿಸುತ್ತಿದ್ದ ಸುಳ್ಯ ತಾಲೂಕು ನಡುಗಲ್ಲು ನಿವಾಸಿ ಚಿನ್ನಪ್ಪ ನಾಯ್ಕ (59) ನವೆಂಬರ್ ತಿಂಗಳಿನಲ್ಲಿ ಎಸ್.ಐ.ಆಗಿ ಭಡ್ತಿಗೊಂಡಿದ್ದರು. ಆರೋಗ್ಯವಾಗಿದ್ದ ಇವರು ರಜೆಯ ಹಿನ್ನಲೆಯಲ್ಲಿ ಮನೆಗೆ ಬಂದಿದ್ದರು. ಆದರೆ ಇಂದು ಮುಂಜಾನೆ ಏಕಾಏಕಿ ಅಸ್ವಸ್ಥಗೊಂಡ ಇವರು, ಹೃದಯಾಘಾತದಿಂದ ಅಸುನೀಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಸ್ವಸ್ಥಗೊಂಡ ತಕ್ಷಣವೇ ಕಡಬ ಸರಕಾರಿ ಆಸ್ಪತ್ರೆಗೆ ಕರೆತರಲಾಗಿತ್ತಾದರೂ ದಾರಿ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದರು. ಮುಂದಿನ ತಿಂಗಳು ನಿವೃತ್ತಿ ಹೊಂದಲಿದ್ದ ಇವರು, ನಿವೃತ್ತಿಗೂ ಮುನ್ನವೇ ಬದುಕಿನ ಪಯಣಕ್ಕೆ ಪೂರ್ಣವಿರಾಮವಿಟ್ಟಿದ್ದಾರೆ.

ಕಡಬ ಸರಕಾರಿ ಆಸ್ಪತ್ರೆಯಲ್ಲಿ ಎಸ್.ಐ.ಚಿನ್ನಪ್ಪ ನಾಯ್ಕರವರ ಮೃತದೇಹ ಇರಿಸಲಾಗಿದ್ದು ಕಡಬ ಎಸ್.ಐ. ರುಕ್ಮ ನಾಯ್ಕ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ತಂದೆ ರಾಮಣ್ಣ ನಾಯ್ಕ, ತಾಯಿ ಕಮಲ, ಪತ್ನಿ ಲೀಲಾವತಿ, ಪುತ್ರ ಸೃಜನ್ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.