Sunday, January 19, 2025
ದಕ್ಷಿಣ ಕನ್ನಡಪುತ್ತೂರುಶುಭಾಶಯಸುದ್ದಿ

ಕರ್ನಾಟಕ ಪ್ರತಿಭಾ ರತ್ನ ಗೌರವಕ್ಕೆ ಅಖಿಲಾ ಶೆಟ್ಟಿ ಕೆಯ್ಯೂರು ಆಯ್ಕೆ- ಕಹಳೆ ನ್ಯೂಸ್

ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಕರ್ನಾಟಕ ಪ್ರತಿಭಾ ರತ್ನ ಗೌರವಕ್ಕೆ ಅಖಿಲಾ ಶೆಟ್ಟಿ ಕೆಯ್ಯೂರು ಆಯ್ಕೆಯಾಗಿದ್ದಾರೆ . ಡಿಸೆಂಬರ್ 18 ರಂದು ಶ್ರವಣಬೆಳಗೊಳದ ಜೈನ ಮಠದ ಆವರಣದ ತುಳುವ ವೇದಿಕೆಯಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಯ್ಯೂರು ದೇರ್ಲ ಜಯರಾಮ ಶೆಟ್ಟಿ ಹಾಗೂ ಇಂದಿರಾ. ಜೆ ಶೆಟ್ಟಿ ದಂಪತಿಗಳ ಪುತ್ರಿಯಾದ ಅಖಿಲಾ ಶೆಟ್ಟಿ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿಯೂ ತನ್ನದೇ ಛಾಪು ಮೂಡಿಸಿ ಭಾಷಣ, ಪ್ರಬಂಧ, ಕಥೆ ಹಾಗೂ ಕವನ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ಬರಹಗಾರ್ತಿಯಾಗಿಯೂ ಗುರುತಿಸಿಕೊಂಡು ತಮ್ಮ ಬರಹಗಳ ಮೂಲಕ ಇದುವರೆಗೂ ಐವತ್ತಕ್ಕೂ ಹೆಚ್ಚು ಸಾಧಕರ ಪರಿಚಯ ಮಾಡಿರುತ್ತಾರೆ. ಕನ್ನಡ ಕರಾವಳಿ ಸಮ್ಮಿಲನ ವೇದಿಕೆಯ ಅಧ್ಯಕ್ಷೆಯಾಗಿದ್ದು ಇವರ ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಈ ಗೌರವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.