Recent Posts

Sunday, September 22, 2024
ಕ್ರೈಮ್ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

PFI ಸಂಘಟನೆ ನಡೆಸಿದ ಪೊಲೀಸರ ಮೇಲಿನ ದಾಳಿ ಮತ್ತು ಅಪ್ರಚೋದಿತ ಹಿಂಸಾಚಾರ ಹಾಗೂ ದಾಂಧಲೆ ಖಂಡನೀಯ ; PFI ಸಂಘಟನೆ ನಿಷೇದಕ್ಕೆ ಶರಣ್ ಪಂಪುವೆಲ್ ಆಗ್ರಹ – ಕಹಳೆ ನ್ಯೂಸ್

ಉಪ್ಪಿನಂಗಡಿ : PFI ಸಂಘಟನೆ ನಡೆಸಿದ ಪೊಲೀಸರ ಮೇಲಿನ ದಾಳಿ ಮತ್ತು ಅಪ್ರಚೋದಿತ ಹಿಂಸಾಚಾರ ಹಾಗೂ ದಾಂಧಲೆ ಖಂಡನೀಯ. PFI ಸಂಘಟನೆ ನಿಷೇದಕ್ಕೆ ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.

ಬಡ ಹಿಂದೂ ಮೀನು ಮಾರಾಟಗಾರರ ಮೇಲಿನ ಹಲ್ಲೆಗೆ ಸಂಭಂದಿಸಿದ ಪ್ರಕರಣದಲ್ಲಿ PFI ಮುಖಂಡರರನ್ನು ಬಂಧಿಸಲಾಗಿತ್ತು, ಇದನ್ನು ವಿರೋಧಿಸಿ PFI ಸಂಘಟನೆ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಪೋಲೀಸರ ಮೇಲೆ ಮಾರಾಕಾಸ್ತ್ರದಿಂದ ಹಲ್ಲೆ ನಡೆಸಿರುವುದು ಖಂಡನೀಯ. ತಮ್ಮ ಪ್ರಾಣದ ಹಂಗು ತೊರೆದು ಸಾರ್ವಜನಿಕರನ್ನು ರಕ್ಷಿಸುವ ಪೊಲೀಸ್ ಸಿಬ್ಬಂದಿಗಳ ಮೇಲೆ ದಾಳಿ ಮಾಡಿದ ಪ್ರತಿಯೊಬ್ಬನಿಗೂ ತಕ್ಕ ಶಿಕ್ಷೆಯಾಗಬೇಕು. ಹಾಗೂ ದೇಶದ್ರೋಹಿ ಕೃತ್ಯವೆಸಗುತ್ತಿರುವ PFI ಮತೀಯ ಸಂಘಟನೆಯನ್ನು ಕರ್ನಾಟಕ ಸರ್ಕಾರ ತಕ್ಷಣ ಅಧಿವೇಶನದ ಈ ಸಂದರ್ಭದಲ್ಲಿ ನಿಷೇಧ ಮಾಡಬೇಕು ಎಂದು ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷದ್ ಆಗ್ರಹಿಸುತ್ತದೆ. ಎಂದು ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು