ಪಿಎಫ್ಐ ಕಾರ್ಯಕರ್ತರ ರಾಕ್ಷಸ ವರ್ತನೆಯನ್ನು ಖಂಡಿಸಿದ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ- ಕಹಳೆ ನ್ಯೂಸ್
ಪುತ್ತೂರು: ನಿನ್ನೆಯಿಂದ ಉಪ್ಪಿನಂಗಡಿಯಲ್ಲಿ ನಡೆಯುತ್ತಿರುವ ಹಲ್ಲೆ ಗಲಭೆಯು ತಾರಕ್ಕೇರುತ್ತಿದ್ದು, ಮತಾಂದ ಪಿಎಫ್‌ಐ ಕಾರ್ಯಕರ್ತರು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ನಡೆದ ಚೂರಿ ಇರಿದಿದ್ದಾರೆ. ಉಪ್ಪಿನಂಗಡಿಯಲ್ಲಿ ನಡೆಯಬಹುದಾದ ಬಹುದೊಡ್ಡ ಅನಾಹುತವನ್ನು ಪೊಲೀಸ್ ಇಲಾಖೆ ಹಿಮ್ಮೆಟ್ಟಿಸಿದೆ. ಹೀಗಾಗಿ ಪಿಎಫ್‌ಐ ಕಾರ್ಯಕರ್ತರು ಪೊಲೀಸ್ ಅಧಿಕಾರಿಗಳ ಮೇಲೆ ನೀಡಿದ ದೂರನ್ನು ಯಾವುದೇ ಕಾರಣಕ್ಕೂ ಮಾನ್ಯ ಮಾಡಬಾರದು ಎಂದು ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಆಗ್ರಹಿಸಿದೆ.
ಹಿಂದು ಮೀನು ವ್ಯಾಪಾರಿಗಳ ಕೊಲೆಯತ್ನ ಕೇಸಿಗೆ ಸಂಬ0ಧಿಸಿದ0ತೆ ಪೊಲೀಸರು ಮೂರು ಜನ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿದ್ದರು,ಇದರ ವಿರುದ್ಧವಾಗಿ ನಿನ್ನೆ ಮಧ್ಯಾಹ್ನದಿಂದ ಉಪ್ಪಿನಂಗಡಿ ಠಾಣ ಮುಂಬಾಗ ಪಿಎಫ್‌ಐ ಕಾರ್ಯಕರ್ತರು ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು, ಇದೊಂದು ಪೂರ್ವ ನಿಯೋಜಿತ ಸಂಚು. ಡಿಜೆ ಹಳ್ಳಿ ಕೆಜಿ ಹಳ್ಳಿ ಯಂತೆ ಉಪ್ಪಿನಂಗಡಿಯನ್ನು ಕೋಮುದಳ್ಳುರಿಗೆ ದೂಡುವ ಒಂದು ಪ್ರಯತ್ನ. ಯಾಕೆಂದರೆ ನಿನ್ನೆ ಸಂಜೆ 6 ಗಂಟೆಗೆ ಉಪ್ಪಿನಂಗಡಿ ಮಸೀದಿಯ ಒಳಗಡೆ ಆರು ಆಂಬುಲೆನ್ಸ್ಗಳನ್ನು ತಂದು ನಿಲ್ಲಿಸಿರುತ್ತಾರೆ, ನಂತರ ಪ್ರತಿಭಟನೆಗೆ ಜಾಸ್ತಿ ಕಾರ್ಯಕರ್ತರನ್ನು ಸೇರಿಸುತ್ತಾರೆ, ಪೊಲೀಸರ ಮೇಲೆ ಕಲ್ಲು ತೂರಾಟ ಪ್ರಾರಂಭವಾಗುತ್ತದೆ, ರಸ್ತೆಯಲ್ಲಿ ನಮಾಜ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡಲಾಗುತ್ತದೆ, ಪೊಲೀಸರ ಮೇಲೆ ಚಾಕು ಇರಿತ ವಾಗುತ್ತದೆ, ಪಿಎಫ್ಐ ಕಾರ್ಯಕರ್ತರ ಕೈಯಲ್ಲಿದ್ದ ತಲವಾರಿನಿಂದ ಮಸೀದಿಯ ತಂಗಲ್ ಮೇಲೆ ದಾಳಿ ಮಾಡಲಾಗುತ್ತದೆ, ನಂತರ ಆರೋಪವನ್ನು ಪೊಲೀಸರ ಮೇಲೆ ಹೊರಿಸಲಾಗುತ್ತದೆ, ಬಂದವರೆಲ್ಲ ಸುಳ್ಯ, ಈಶ್ವರಮಂಗಲ ,ಬೆಳ್ತಂಗಡಿ , ಕಡಬ ಭಾಗದಿಂದ ಪಿಎಫ್‌ಐ ಕಾರ್ಯಕರ್ತರು. ಪೊಲೀಸರ ಮೇಲೆ ಎಸೆದ ಕಲ್ಲು ಅವರ ಕಾರ್ಯಕರ್ತರ ಮೇಲೆ ಬಿದ್ದು ಪೆಟ್ಟಾಗಿದ್ದು ಬಿಟ್ಟರೆ ಪೊಲೀಸರಿಂದ ಅಲ್ಲ , ಪೊಲೀಸರ ಕೈಯಲ್ಲಿ ಯಾವುದೇ ಮಾರಕಾಸ್ತ್ರಗಳು ಇರುವುದಿಲ್ಲ, ಆದ್ದರಿಂದ ಮತಾಂದ ಪಿಎಫ್‌ಐ ಕಾರ್ಯಕರ್ತರು ಪೊಲೀಸ್ ಅಧಿಕಾರಿಗಳ ಮೇಲೆ ನೀಡಿದ ದೂರನ್ನು ಯಾವುದೇ ಕಾರಣಕ್ಕೂ ಮಾನ್ಯ ಮಾಡಬಾರದು ಎಂದು ಆಗ್ರಹಿಸಿದೆ.
ಈ ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕಾಗಿ ಪೊಲೀಸ್ ವರಿಷ್ಠಾಧಿಕಾರಿಯವರಲ್ಲಿ ಹಾಗೂ ಗೃಹ ಇಲಾಖೆಯನ್ನು ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಒತ್ತಾಯಿಸಿದೆ.