Tuesday, January 21, 2025
ಹೆಚ್ಚಿನ ಸುದ್ದಿ

ಹಿಂದೂ ಧರ್ಮದಿಂದ ಅನ್ಯ ಧರ್ಮಕ್ಕೆ ಮತಾಂತರ ಆಗಿರುವವರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರಬೇಕು : ಮೋಹನ್ ಭಾಗವತ್ – ಕಹಳೆ ನ್ಯೂಸ್

ಚಿತ್ರಕೂಟದಲ್ಲಿ ಹಿಂದೂ ಮಹಾಕುಂಭ ನಡೆಯುತ್ತಿದ್ದು, ಮಹಾಕುಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಚಾಲಕ ಮೋಹನ್ ಭಾಗವತ್ ಭಾಗಿಯಾಗಿದ್ದಾರೆ. ಆನರನ್ನ ಉದ್ದೇಶಿಸಿ ಮಾತನಾಡಿದ ಇವರು ಅನ್ಯ ಧರ್ಮಗಳಿಗೆ ಹಿಂದೂ ಧರ್ಮದಿಂದ ಮತಾಂತರ ಆಗಿರುವವರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರಲು ಹಿಂದೂಗಳು ಪ್ರತಿಜ್ಞೆ ಮಾಡಬೇಕು. ಜೊತೆಗೆ ಹಿಂದೂಗಳು ಮತಾಂತರ ಆಗದಂತೆಯೂ ನೋಡಿಕೊಳ್ಳಬೇಕಿದೆ. ನಾವೆಲ್ಲರೂ ಹಿಂದೂ ಸಹೋದರಿಯರ ಘನತೆಯನ್ನು ಕಾಪಾಡುವ ಪ್ರತಿಜ್ಞೆ ಮಾಡಬೇಕಿದೆ” ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

“ಮಹಾಕುಂಭದಲ್ಲಿ ಭಾಗವಹಿಸಿರುವ ಸ್ವಾಮೀಜಿಗಳು ಹಾಗೂ ದಾರ್ಶನಿಕರು ಲವ್ ಜಿಹಾದ್, ಮತಾಂತರಕ್ಕೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿದ ಅವರು, ಹಿಂದೂ ಸಂಸ್ಕøತಿ ಹಾಗೂ ಸಂಪ್ರದಾಯವನ್ನು ರಕ್ಷಿಸಬೇಕು” ಎಂದು ಹೇಳಿದ್ದಾರೆ.

“ಹಿಂದೂಗಳಲ್ಲಿ ಏಕತೆ ತರಬೇಕಾದ ಅವಶ್ಯಕತೆ ಇದ್ದು, ಜಾತೀಯತೆ ಹಾಗೂ ಇತರ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಬೇಕಿದೆ” ಎಂದಿದ್ದಾರೆ