ಭಾರತೀಯ ಸೇನಾ ಪಡೆಯ ಮೂರೂ ವಿಭಾಗದ ಮುಖ್ಯಸ್ಥ ಹುದ್ದೆಗೆ ಎಂ.ಎಂ.ನರವಣೆ ಅಧಿಕಾರ ಸ್ವೀಕಾರ –ಕಹಳೆ ನ್ಯೂಸ್
ಭಾರತೀಯ ಸೇನಾ ಪಡೆಯ ಮೂರೂ ವಿಭಾಗದ ಮುಖ್ಯಸ್ಥ ಹುದ್ದೆಯಾದ ಚೀಫ್ ಆಫ್ ಸ್ಟಾಫ್ ಕಮಿಟಿ ಅಧ್ಯಕ್ಷರಾಗಿ ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ಡಿಸೆಂಬರ್ 8ರಂದು ಐಎಎಫ್ ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ನಿಧನರಾದ ನಂತರ ತೆರವಾಗಿದ್ದ ಸ್ಥಾನಕ್ಕೆ ನರವಣೆ ಅವರನ್ನು ನೇಮಕ ಮಾಡಲಾಗಿದೆ.
ಚೀಫ್ ಆಫ್ ಆರ್ಮಿ ಸ್ಟಾಫ್(COAS) ಜನರಲ್ ಬಿಪಿನ ರಾವತ್ ಅವರನ್ನು 2019ರಲ್ಲಿ ಮೂರು ಸೇನೆಗಳ ಮುಖ್ಯಸ್ಥರನ್ನಾಗಿ(CDS) ನೇಮಕ ಮಾಡಲಾಯಿತು. ಹೀಗಾಗಿ ತೆರವಾದ COAS ಸ್ಥಾನಕ್ಕೆ ಡಿಸೆಂಬರ್ 31, 2019ರಲ್ಲಿ ಮನೋಜ್ ಮುಕುಂದ್ ನರವಣೆಯನ್ನು ನೇಮಕ ಮಾಡಲಾಗಿತ್ತು. ಸರಿಸುಮಾರು 2 ವರ್ಷಗಳ ಕಾಲ COAS ಆಗಿ ಸೇವೆ ಸಲ್ಲಿಸಿದ ಎಂಎಂ ನರವಣೆ ಇದೀಗ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಆಗಿ ಬಡ್ತಿ ಪಡೆದಿದ್ದಾರೆ.
ಸೇನೆ, ನೌಕಾಪಡೆ ಮತ್ತು ವಾಯಪಡೆಯ ಮುಖ್ಯಸ್ಥರ ಪೈಕಿ ಅತ್ಯಂತ ಹಿರಿಯರು ಚೀಫ್ ಆಫ್ ಸ್ಟಾಫ್ ಕಮಿಟಿ ಅಧ್ಯಕ್ಷರಾಗಿ ನಿಯುಕ್ತಿಗೊಳ್ಳುತ್ತಿದ್ದರು. ಈ ಹಿಂದೆ ಬಿಪಿನ್ ರಾವತ್ ಅವರು ಈ ಹುದ್ದೆ ಮತ್ತು ಸಶಸ್ತ್ರ ಪಡೆಗಳ ಮುಖ್ಯಸ್ಥ ಹುದ್ದೆ ಎರಡನ್ನೂ ನಿರ್ವಹಿಸುತ್ತಿದ್ದರು. ಇದೀಗ ನರವಣೆ ಈ ಹುದ್ದೆಗೆ ನೇಮಕವಾಗಿರುವ ಹಿನ್ನೆಲೆಯಲ್ಲಿ ಅವರೇ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಬಹುದು ಎಂಬ ಸುದ್ದಿಗೆ ಇನ್ನಷ್ಟು ಬಲ ಬಂದಿದೆ. ಭಾರತೀಯ ಸೇನಾ ಮುಖ್ಯಸ್ಥರ ಸ್ಥಾನಕ್ಕೆ ನಾಲ್ವರ ಹೆಸರು ಕೇಳಿಬಂದಿತ್ತು. ಇದರಲ್ಲಿ ನರವಣೆ ಹೆಸರು ಮುಂಚೂಣಿಯಲ್ಲಿತ್ತು. ಇತರ ಮೂವರ ಹೆಸರುಗಳೆಂದರೆ ನಿವೃತ್ತ ಏರ್‍ಚೀಫ್ ಮಾರ್ಷಲ್ ಆರ್ ಕೆಎಸ್ ಬದೌರಿಯಾ, ವಾಯುಸೇನೆ ಎರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಹಾಗೂ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಹೆಸರುಗಳು ಕೇಂದ್ರ ಸಚಿವ ಸಂಪುಟ ಭದ್ರತಾ ಸಮಿಯಲ್ಲಿ ಚರ್ಚೆಯಾಗಿತ್ತು. ಅಂತಿಮವಾಗಿ ನರವಣೆಗೆ CDS ಸ್ಥಾನ ನೀಡಲಾಗಿದೆ.
ಮಹಾರಾಷ್ಟ್ರ ಮೂಲದ ಎಂಎಂ ನರವಣೆ ತಂದೆ ಮಕುಂದ್ ನರವಣೆ ವಾಯುಸೇನೆಯ ವಿಂಗ್ ಕಮಾಂಡರ್ ಆಗಿ ನಿವೃತ್ತರಾಗಿದ್ದಾರೆ. ತಾಯಿ ಆಲ್ ಇಂಡಿಯಾ ರೇಡಿಯೋದ ವಾಚಕಿಯಾಗಿದ್ದರು. ಎಂಎಂ ನರವಣೆ ತಮ್ಮ ಶಾಲಾ ವಿದ್ಯಾಭ್ಯಾಸವನ್ನು ಪುಣೆಯ ಜ್ಞಾನ ಪ್ರಭೋಧಿನ ಪ್ರಶಾಲದಲ್ಲಿ ಮುಗಿಸಿದ್ದಾರೆ. ಇನ್ನು ಪುಣೆಯ ನ್ಯಾಶನಲ್ ಡಿಫೆನ್ಸ್ ಅಕಾಡೆಮಿ ಹಾಗೂ ಡೆಹ್ರಡೂನ್ ಮಿಲಿಟರಿ ಅಕಾಡೆಮಿಯಲ್ಲಿ ಪದವಿ ಪಡೆದಿದ್ದಾರೆ. PVSM AVSM SM VSM ADC ಎಂಎಂ ನರವಣೆ ಸದ್ಯ ಭಾರತೀಯ ಸೇನೆಯ ಚೀಫ್ ಆಫ್ ದಿ ಆರ್ಮಿ ಸ್ಟಾಫ್. ಚೆನ್ನೈ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಡಿಫೆನ್ಸ್ ಸ್ಟಡಿಯಲ್ಲಿ ಮಾಸ್ಟರ್ ಡಿಗ್ರಿ ಪೂರೈಸಿದ್ದಾರೆ. ಡಿಫೆನ್ಸ್ ಮ್ಯಾನೇಜ್ಮೆಂಟ್ ವಿಷಯದಲ್ಲಿ M.Phil ಪಡೆದಿದ್ದಾರೆ. ನರವಣೆ ಪತ್ನಿ ವೀಣಾ ನರವಣೆ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದಾರೆ. ಸದ್ಯ ಸೇನಾ ಪತ್ನಿಯರ ಕಲ್ಯಾಣ ಸಂಘದ ಅಧ್ಯಕ್ಷರಾಗಿದ್ದಾರೆ. ನರವಣೆ ದಂಪತಿಗೆ ಇಬ್ಬರು ಪುತ್ರಿಯರು. ಎಂಎಂ ನರವಣೆ 1980ರಲ್ಲಿ 7ನೇ ಬೆಟಾಲಿಯನ್ ಸಿಖ್ ಲೈಟ್ ಇನ್‍ಫಾಂಟ್ರಿಯಲ್ಲಿ ನಿಯೋಜನೆಗೊಂಡರು. ಬಳಿಕ ರಾಷ್ಟ್ರೀಯ ರೈಫಲ್ಸ್ 2ನೇ ಬೆಟಾಲಿಯನ್, 106 ಇನ್‍ಫಾಂಟ್ರಿ ಬ್ರಿಗೇಡ್, ಅಸ್ಸಾಂ ರೈಫರ್ಸ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇನ್ನು ಕಾಶ್ಮೀರದಲ್ಲಿ ಬಂಡಾಯ ನಿಗ್ರಹ ಕಮಾಂಡರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.