ಮಂಗಳೂರು, ಮೇ 28: ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗುತ್ತಿದ್ದರೆ, ಅತ್ತಕಡೆ ಅರಬ್ಬಿ ಸಮುದ್ರದಲ್ಲಿ ಮತ್ತೆ ವಾಯುಬಾರ ಕುಸಿತ ಉಂಟಾಗಿದೆ. ಒಂದು ವೇಳೆ ಅದರೆ ಸಾಂದ್ರತೆ ಜಾಸ್ತಿಯಾದರೆ ಒಂದೆರಡು ದಿನದೊಳಗೆ ಕರಾವಳಿಯಲ್ಲಿ ಮತ್ತೊಂದು ಚಂಡಮಾರುತ ಸೃಷ್ಟಿಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕಳೆದ ವರ್ಷದ ಡಿಸೆಂಬರ್ ತಿಂಗಳಿನಿಂದ ಮೇ ತಿಂಗಳವರೆಗೆ ರಾಜ್ಯದಲ್ಲಿ ಒಟ್ಟು ಮೂರು ಪ್ರಬಲ ಚಂಡಮಾರುತಗಳು ಪರಿಣಾಮ ಬೀರಿದೆ. ಡಿಸೆಂಬರ್ ನಲ್ಲಿ ಒಖಿ ಚಂಡಮಾರುತದ ದಕ್ಷಿಣ ಭಾರತದ ಕರಾವಳಿಯನ್ನು ಅಪ್ಪಳಿಸಿತ್ತು. ಒಂದು ವಾರಗಳ ಕಾಲ ನಿರಂತರ ಮಳೆ , ಗಾಳಿಯ ಪರಿಣಾಮವಾಗಿ ಕೆಲವು ಕಡೆ ಕರಾವಳಿ ಭಾಗದಲ್ಲಿ ಬೆಳೆ ನಾಶ ಹಾಗೂ ಪ್ರಾಣ ಹಾನಿಯಾಗಿತ್ತು. ಮೇ ತಿಂಗಳಲ್ಲಿ ಸಾಗರ್ ಚಂಡಮಾರುತ ದಿಂದ ಕರಾವಳಿ ತೀರದಲ್ಲಿ ಗಾಳಿ ಮಳೆ ಆಗಿತ್ತು. ಇದಾದ ಕೆಲವೇ ದಿನಗಳಲ್ಲಿ ಮೆಕ್ನು ಎಂಬ ಮತ್ತೊಂದು ಪ್ರಬಲ ಚಂಡಮಾರುತ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿ ಒಮಾನ್ ನಲ್ಲಿ ಸಾಕಷ್ಟು ನಷ್ಟ ಹಾಗೂ ಹಾನಿಯುಂಟು ಮಾಡಿದೆ. ಮೆಕ್ನು ಚಂಡಮಾರುತದ ಪರಿಣಾಮದಿಂದಲೂ ಕೆಲವು ಕಡೆ ಉತ್ತಮ ಮಳೆಯಾಗಿದೆ ಬೀರಿವೆ.