Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬಿಜೆಪಿ ಮಹಿಳಾ ಮೋರ್ಚಾ ಪುತ್ತೂರು ನಗರ ಮಂಡಲದಿಂದ ಇ-ಶ್ರಮಿಕ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಎಪಿಯಲ್ ರೇಷನ್ ಕಾರ್ಡ್ ನವೀಕರಣ ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು: ಬಿಜೆಪಿ ಮಹಿಳಾ ಮೋರ್ಚಾ ಪುತ್ತೂರು ನಗರ ಮಂಡಲದ ವತಿಯಿಂದ ಇ-ಶ್ರಮಿಕ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಎಪಿಯಲ್ ರೇಷನ್ ಕಾರ್ಡ್ ನವೀಕರಣ ಕಾರ್ಯಕ್ರಮ ಡಿ.16ರಂದು ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ಸಹಕಾರ ಜ್ಯೋತಿ ಸಭಾಭವನದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

‘ಸಹಕಾರ ಜ್ಯೋತಿ ಸಭಾಭವನದಲ್ಲಿ ‘ಸರ್ಕಾರದ ಯೋಜನೆಯ ಅಭಿಯಾನದ ಅಂಗವಾಗಿ ಈ ಕಾರ್ಯಕ್ರಮ ನಡೆದಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿ ಹಾಗೂ ಎಸ್.ಡಿ.ಪಿ. ಸಂಸ್ಥೆಯ ಪಾಲುದಾರರಾದ ರೂಪಲೇಖ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಇವರು ಮಹಿಳಾ ಮೋರ್ಚಾ ಎತ್ತಿಕೊಂಡಿರುವ ಎಲ್ಲ ಜನಸೇವಾ ಕಾರ್ಯಗಳೂ ಶ್ಲಾಘನೀಯ ಎಂದು ಬಿಜೆಪಿ ಮಹಿಳಾ ಮೋರ್ಚಾ ಪುತ್ತೂರು ನಗರ ಮಂಡಲದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ರು.Video ಉಪ್ಪಿನಂಗಡಿಯಲ್ಲಿ ಕ್ರೌರ್ಯ ಮೆರೆದ ಎಸ್‍ಡಿಪಿಐ ಪಿಎಫ್‍ಐ: ಕಾರ್ಯನಿರತ ಪೊಲೀಸರ ಮೇಲೆ ನರಹಂತಕರಂತೆ ದಾಳಿ ಎಷ್ಟು ಸರಿ..?

ಬಿ.ಜೆ.ಪಿ. ಪುತ್ತೂರು ಮಹಿಳಾ ಮೋರ್ಚದ ಅಧ್ಯಕ್ಷರಾದ ಶರಾವತಿ ರವಿನಾರಾಯಣ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಜಿಲ್ಲಾ ಮ.ಮೋ.ಪ್ರಧಾನ ಕಾರ್ಯದರ್ಶಿ ತ್ರಿವೇಣಿ ಪೆರುವೋಡಿ , ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಪ್ರಭಾ ಆಚಾರ್ಯ, ಜಿಲ್ಲಾ ಕಾರ್ಯದರ್ಶಿಗಳಾದ ಜಯಂತಿ ನಾಯಕ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರೆಯತ್ತೋಡಿ , ಮಂಡಲ ಮ.ಮೋ.ದ ಸಹ ಪ್ರಭಾರಿಗಳಾದ ಅರ್ಪಣ ಪಡೀಲ್, ಸಾಕ್ಷಿ ಕಮ್ಯುನಿಕೇಶನ್ ಸಿಬ್ಬಂದಿ ಸುಪ್ರೀತ, ಮ.ಮೋ.ದ ಪ್ರಧಾನ ಕಾರ್ಯದರ್ಶಿಗಳಾದ ಜಯಶ್ರೀ ನಾಯಕ್ ಪ್ರಭಾವತಿ , ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.