Recent Posts

Sunday, January 19, 2025
ಕ್ರೀಡೆದಕ್ಷಿಣ ಕನ್ನಡಪುತ್ತೂರುಸುದ್ದಿ

ಮಂಗಳೂರು ವಿವಿ ಫುಟ್ ಬಾಲ್ ಕ್ರೀಡಾಕೂಟ: ಸಂತ ಫಿಲೋಮಿನಾ ಕಾಲೇಜು ಚಾಂಪಿಯನ್- ಕಹಳೆ ನ್ಯೂಸ್

ಪುತ್ತೂರು: ಮಂಗಳೂರು ವಿಶ್ವವಿದ್ಯಾಲಯದ ವಲಯ ಮಟ್ಟದ ಫುಟ್ ಬಾಲ್ ಕ್ರೀಡಾಕೂಟದಲ್ಲಿ ಸಂತ ಫಿಲೋಮಿನಾ ಕಾಲೇಜು ಚಾಂಪಿಯನ್ ಆಗಿ ಮೂಡಿ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ವಿಶ್ವವಿದ್ಯಾಲಯ ಮತ್ತು ಮೂಡಬಿದಿರೆಯ ಆಳ್ವಾಸ್ ಕಾಲೇಜು ವತಿಯಿಂದ ಆಳ್ವಾಸ್ ಕಾಲೇಜಿನಲ್ಲಿ ಫುಟ್ ಬಾಲ್ ಕ್ರಿಡಾಕೂಟವನ್ನು ಆಯೋಜಿಸಲಾಗಿತ್ತು. ಮಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿದ ಕಾಲೇಜುಗಳನ್ನು ಉಡುಪಿ ಮತ್ತು ಮಂಗಳೂರು ವಲಯಗಳಾಗಿ ವರ್ಗೀಕರಿಸಿ ಮೊದಲ ಸುತ್ತಿನ ಸ್ಪರ್ಧೆ ನಡೆದು, ಪ್ರತಿ ವಲಯದಿಂದ ಮೊದಲೆರಡು ಸ್ಥಾನ ಪಡೆದ ನಾಲ್ಕು ಕಾಲೇಜುಗಳ ನಡುವೆ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯ ನಡೆಯಿತು.

ಸಂತಫಿಲೋಮಿನಾ ಕಾಲೇಜು ಮತ್ತು ಸಂತ ಎಲೋಶಿಯಸ್ ಕಾಲೇಜುಗಳು ಈ ಸುತ್ತುಗಳಲ್ಲಿ ಜಯ ಪಡೆದು ಫೈನಲ್ಲಿಗೆ ಏರಿದುವು. ರೋಮಾಂಚಕಾರಿಯಾಗಿ ಸಾಗಿದ ಫೈನಲ್‍ನಲ್ಲಿ ಸಂತ ಫಿಲೋಮಿನಾ ಕಾಲೇಜು ತಂಡವು 1-0 ಗೋಲಿನ ಅಂತರದಲ್ಲಿ ಸಂತ ಎಲೋಶಿಯಸ್ ಕಾಲೇಜನ್ನು ಮಣಿಸಿ ಬೋಳಾರ ಸದಾನಂದ ಮತ್ತು ವಾಮನ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿತು. ಸೊಲೋಮನ್ ರೋಶನ್ ಜೋಸೆಫ್ ಇವರು ನಾಯಕನಾಗಿ ತಂಡವನ್ನು ಮುನ್ನಡೆಸಿದರು. ತಂಡಕ್ಕೆ ಕಾಲೇಜಿನ ದೈಹಿಕ ಶಿಕ್ಷಕ ನಿರ್ದೇಶಕರಾದ ಪ್ರೊ.ಎಲ್ಯಾಸ್ ಪಿಂಟೋ ಮಾರ್ಗದರ್ಶನ ನೀಡಿದರು.