Thursday, November 28, 2024
ಸುದ್ದಿ

ದೇಂತಡ್ಕ ಮೇಳದ ಆಟ, ತೂವಾಂದೆ ಕುಲ್ಲಡೆ.

ಬಂಟ್ವಾಳ : ಯಕ್ಷಗಾನ ದಕ್ಷಿಣ ಭಾರತದ ಜೀವಾಳ, ಆರಾಧನಾ ಕಲೆ, ಕಟೀಲು, ಧರ್ಮಸ್ಥಳ, ಮೊದಲಾದ ಮೇಳಗಳು ಹರಕೆಯ ರೂಪದಲ್ಲಿ ಯಕ್ಷಗಾನ ಬಯಲಾಟವನ್ನು ನಡೆಸಿಕೊಂಡು ಬಂದಿದೆ. ಪರಂಪರೆ ಹಾಗು ಹಳೆಯ ತುಳು ಪ್ರಸಂಗವನ್ನು ಮತ್ತೆ ಬೆಳಗಿಸುವ ದೃಷ್ಟಿಯಲ್ಲಿ ಯಕ್ಷರಂಗಕ್ಕೆ ಕಾಲಿರಿಸುತ್ತಿದೆ

ಶ್ರೀವನದುರ್ಗಾ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ದೇಂತಡ್ಕ.
ಮೇಳದ ಕಲಾವಿದರ ಒಗ್ಗೂಡುವಿಕೆಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ವನದುರ್ಗಾ ದೇವಸ್ಥಾನ ದೇಂತಡ್ಕದಲ್ಲಿ ಗೆಜ್ಜೆ ಕಟ್ಟಿ ಯಕ್ಷಗಾನ ಬಯಲಾಟವನ್ನು ನಡೆಸುದರ ಸಾಂಕೇತಿಕವಾಗಿ ಮೇಳವು ಆರಂಭಗೊಂಡಿದೆ.
ನೂತನ ಮೇಳವು
ನವೆಂಬರ್ 3 ರಂದು ಶ್ರೀ ಕ್ಷೇತ್ರ ದೇಂತಡ್ಕದಲ್ಲಿ ಸೇವೆ ಸಲ್ಲಿಸಿ ದಿಗ್ವಿಜಯಕ್ಕೆ ಹೊರಡಲಿದೆ.
ದೇಂತಡ್ಕ ಕ್ಷೇತ್ರದ ಭಕ್ತರಾದ ಧಕ್ಷ ವ್ಯವಸ್ಥಾಪಕರಾದ ಸತ್ಯಪಾಲ ರೈ ಸಂಚಾಲಕತ್ವ ಹಾಗೂ ಕಲಾವಿದ ರಮೇಶ ಕುಲಶೇಖರ ಮ್ಯಾನೇಜರ್ ಆಗಿ ಮೇಳವನ್ನು ಮುನ್ನಡೆಸಲಿದ್ದಾರೆ. ಜಿಲ್ಲೆಯ ಹಿರಿಯ ನುರಿತ ಕಲಾವಿದರು ಮೇಳದಲ್ಲಿ ಪ್ರಮುಖ ಪತ್ರವಹಿಸಲಿದ್ದಾರೆ. ಅಲ್ಲದೆ ವಿವಿಧ ಮೇಳಗಳ ಪ್ರಸಿದ್ಧ ಕಲಾವಿದರು ಅತಿಥಿ ಕಲಾವಿದರಾಗಿ ಭಾಗವಹಿಸಲಿದ್ದಾರೆ. ಒಟ್ಟಾರೆ ಯಕ್ಷಗಾನ ಪ್ರೀಯರಿಗೆ ಹೊಸದೊಂದು ಮೇಳದ ಬರುವಿಕೆ ಸಂತಸವನ್ನುಂಟು ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು