Sunday, November 24, 2024
ದಕ್ಷಿಣ ಕನ್ನಡ

ನಾಡದೋಣಿ ತಂಗಲು ರೇವು ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್‍ರಿಂದ ಶಿಲನ್ಯಾಸ- ಕಹಳೆ ನ್ಯೂಸ್

ಮಂಗಳೂರು: ನಗರದ ಬೆಂಗ್ರೆ ಪ್ರದೇಶದಲ್ಲಿ 3.70 ಕೋಟಿ ರೂ.ಗಳ ಅನುದಾನದಲ್ಲಿ ನಾಡದೋಣಿ ತಂಗಲು ರೇವು ನಿರ್ಮಾಣ ಕಾಮಗಾರಿ ಹಾಗೂ 2 ಕೋಟಿ ಅನುದಾನದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ನಿರ್ಮಾಣ ಕಾಮಗಾರಿಗೆ ಶಾಸಕರಾದ ವೇದವ್ಯಾಸ ಕಾಮತ್ ಅವರು ಡಿ.18ರ ಶನಿವಾರದಂದು ಭೂಮಿಪೂಜೆ ನೆರವೇರಿಸಿದರು. 90 ಮೀ. ಉದ್ದದ ನಾಡದೋಣಿ ತಂಗಲು ಬೀಚ್ ಲ್ಯಾಂಡಿಂಗ್, 90 ಮೀ. ಉದ್ದದ ಕಂಕ್ರೀಟ್ ರಸ್ತೆ, ನಾಡದೋಣಿ ತಂಗಲು 2.0 ಮೀ ಅಳಕ್ಕೆ ಹೂಳೆತ್ತುವುದು, 56 ಮೀ ಉದ್ದದ 450 ಮೀ.ಮೀ ದಪ್ಪದ 450 ಮಿಮೀ ದಪ್ಪದ ಡಯಾಫ್ರಮ್ ವಾಲ್, 36 ಮೀ ಉದ್ದದ 600 ಮಿಮೀ ದಪ್ಪದ ಡಯಾಡ್ರಮ್ ವಾಲ್, 45 ಮೀ ಉದ್ದದ ಆರ್.ಸಿ.ಸಿ ತಡೆಗೋಡೆ ಯೋಜನೆಗಳನ್ನು ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರು, ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು