ಬಿಜೆಪಿ ಯುವ ಮೋರ್ಚಾ ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರದ ಮತ್ತು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರ : ಉಪ್ಪಿನಂಗಡಿಯಲ್ಲಿ ಗಲಭೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮನವಿ : ಉಪ್ಪಿನಂಗಡಿ ಆರಕ್ಷಕ ಠಾಣೆಯ ಠಾಣಾಧಿಕಾರಿಯವರಿಗೆ ಮನವಿ ಸಲ್ಲಿಕೆ -ಕಹಳೆ ನ್ಯೂಸ್
ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರದ ಮತ್ತು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರದ ವತಿಯಿಂದ, ಉಪ್ಪಿನಂಗಡಿಯಲ್ಲಿ ಗಲಭೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಉಪ್ಪಿನಂಗಡಿ ಆರಕ್ಷಕ ಠಾಣೆಯ ಠಾಣಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು.
ದಿನಾಂಕ 14/12/2021 ರಂದು ದಿನವಿಡೀ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ರಸ್ತೆಯಲ್ಲಿ ನಾಗರಿಕರ ಸಂಚಾರಕ್ಕೆ ತಡೆಯೊಡ್ಡಿದ ಹಾಗೂ ಆಂಬುಲೆನ್ಸ್ ನಲ್ಲಿ ಅಕ್ರಮವಾಗಿ ಮಾರಕಾಯುಧಗಳನ್ನು ಇರಿಸಿ ಪೋಲೀಸರ ಮೇಲೆ ಆಕ್ರಮಣ ನಡೆಸಿದ ಹಾಗೂ ಗಾಯಾಳುಗಳ ನೆಪದಲ್ಲಿ ಗಲಭೆಕೊರರನ್ನು ಸಾಗಿಸಲು ಆಂಬುಲೆನ್ಸ್ ಗಳನ್ನು ಬಳಸಿದ್ದ ದುಷ್ಕರ್ಮಿಗಳ ಕೃತ್ಯವನ್ನು ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಒತ್ತಾಯಿಸಿ ಯುವ ಮೋರ್ಚಾ ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರದ ಸಂಚಾಲಕರಾದ ಧನಂಜಯ ನೆಟ್ಟಿಬೈಲು, ಹಾಗೂ ಓಬಿಸಿ ಮೋರ್ಚಾದ ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರದ ಸಂಚಾಲಕರಾದ ಪ್ರಸಾದ್ ಭಂಡಾರಿ ಪುತ್ತೂರು ಯುವ ಮೋರ್ಚಾ ಗ್ರಾಮಾಂತರ ಮಂಡಲ ಕಾರ್ಯದರ್ಶಿ ಆದೇಶ್ ಶೆಟ್ಟಿ, ಪುತ್ತೂರು ಯುವ ಮೋರ್ಚಾ ಗ್ರಾಮಾಂತರ ಮಂಡಲ ಸದಸ್ಯ ಗಿರೀಶ್, ಯುವ ಮೋರ್ಚಾದ ಉಪ್ಪಿನಂಗಡಿ ಶಕ್ತಿಕೇಂದ್ರ ಪ್ರತಿನಿಧಿ ಯತೀಶ್ ಶೆಟ್ಟಿ, ಹಾಗೂ ಓಬಿಸಿ ಮೋರ್ಚಾದ ಉಪ್ಪಿನಂಗಡಿ ಶಕ್ತಿಕೇಂದ್ರ ಪ್ರತಿನಿಧಿ ಕಿರಣ್ ಕುಮಾರ್ ಉಪ್ಪಿನಂಗಡಿ ಠಾಣೆಗೆ ತೆರಳಿ ಉಪ್ಪಿನಂಗಡಿ ಆರಕ್ಷಕ ಠಾಣೆಯ ಠಾಣಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.