Monday, January 20, 2025
ದಕ್ಷಿಣ ಕನ್ನಡಸುದ್ದಿ

ರಾಜ್ಯ ಒಕ್ಕಲಿಗ ಸಂಘದ ಚುನಾವಣೆಯಲ್ಲಿ ಜಯ ಗಳಿಸಿದ ಡಾಕ್ಟರ್ ರೇಣುಕಾಪ್ರಸಾದ್ ರವರಿಗೆ ಅಭಿನಂದನೆ ತಿಳಿಸಿದ ಹೇಮಾನಂದ ಗೌಡ- ಕಹಳೆ ನ್ಯೂಸ್

ಡಿ.12 ರಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಒಕ್ಕಲಿಗರ ಸಂಘದಿಂದ ಚುನಾವಣೆ ನಡೆದಿದ್ದು, ಚುನಾವಣೆಯ ಕಣಕ್ಕೆ ಇಳಿದಿದ್ದ ಡಾ.ಕೆ.ವಿ.ರೇಣುಕಾಪ್ರಸಾದ್‍ರವರಿಗೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನ ಒಲಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯ ಒಕ್ಕಲಿಗ ಸಂಘದ ಚುನಾವಣೆಯಲ್ಲಿ ಜಯ ಗಳಿಸಿದ ಡಾಕ್ಟರ್ ರೇಣುಕಾಪ್ರಸಾದ್ ರವರಿಗೆ ಹೇಮಾನಂದ ಗೌಡ ಅಭಿನಂದನೆ ತಿಳಿಸಿದ್ದಾರೆ. “ರಾಜ್ಯ ಒಕ್ಕಲಿಗ ಸಂಘದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಡಾಕ್ಟರ್ ರೇಣುಕಾಪ್ರಸಾದ್ ರವರು ಜಯ ಗಳಿಸಿದ್ದಾರೆ. ಅವರಿಗೆ ತುಂಬು ಹೃದಯದ ಅಭಿನಂದನೆಗಳು ಸುಳ್ಯದ ಕುರುಂಜಿ ಮನೆತನದವರಾದ ಶ್ರೀಯುತ ಡಾಕ್ಟರ್ ರೇಣುಕಾಪ್ರಸಾದ್ ಮತ್ತು ಡಾಕ್ಟರ್ ಚಿದಾನಂದ ರವರು ಸ್ಪರ್ಧಾ ಕಣದಲ್ಲಿದ್ದು ಅವರ ಜೊತೆ ಮೂರನೇ ಅಭ್ಯರ್ಥಿಯಾಗಿ ಸ್ಪರ್ಧಿಸಿದೆ. ಜಿಲ್ಲೆಯ ಕುಲಬಾಂಧವರು ನನ್ನನ್ನು ಗುರುತಿಸಿ 346 ಮತಗಳನ್ನು ನೀಡಿದ್ದಾರೆ. ಇಬ್ಬರು ಘಟಾನುಘಟಿಗಳ ಎದುರು ಸ್ಪರ್ಧಿಸುವುದೇ ಸಾಹಸ ಅದರಲ್ಲೂ 346 ಮತಗಳನ್ನು ಪಡೆದಿರುವುದು ಹೆಮ್ಮೆಯ ವಿಷಯ. ದಕ್ಷಿಣ ಕನ್ನಡ ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಕುಲಬಾಂಧವರು ನನ್ನನ್ನು ಗುರುತಿಸಿದ್ದು ಬಹಳ ಸಂತೋಷವಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಕುಲಬಾಂಧವರ ಪರವಾಗಿ ಕೆಲಸ ಮಾಡಲು ಹೆಚ್ಚು ಪ್ರೇರಣೆಯಾಗುತ್ತದೆ. ನನಗೆ ಮತ ನೀಡಿದ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಎಲ್ಲಾ ಕುಲಬಾಂಧವರಿಗೆ ಹೃತ್ಪೂರ್ವಕ ಧನ್ಯವಾದಗಳು ಮುಂದಿನ ದಿನಗಳಲ್ಲೂ ನೀವೆಲ್ಲರೂ ನನ್ನ ಜೊತೆಗೆ ಇರುತ್ತೀರಿ ಎಂದು ಆಶಿಸುತ್ತೇನೆ” ಎಂದರು.