Monday, January 20, 2025
ದಕ್ಷಿಣ ಕನ್ನಡಬಂಟ್ವಾಳ

ಕಾರಿಂಜೇಶ್ವರ ಕ್ಷೇತ್ರ ಸಂರಕ್ಷಣೆಯ ಕಾರ್ಯಕ್ಕೆ ಸಾತ್ ನೀಡಲಿದ್ದಾರೆ ಜಿಲ್ಲೆಯ ಮಠಾಧೀಶರು– ಕಹಳೆ ಕಹಳೆ ನ್ಯೂಸ್

 ಕಾರಿಂಜೇಶ್ವರ ಕ್ಷೇತ್ರ ಸಂರಕ್ಷಣೆಯ ಕಾರ್ಯಕ್ಕೆ ಜಿಲ್ಲೆಯ ಮಠಾಧೀಶರು ಸಾತ್ ನೀಡಲಿದ್ದು, ಡಿಸೆಂಬರ್ 20 ಸೋಮವಾರ ಮಧ್ಯಾಹ್ನ 11 ಗಂಟೆಗೆ ಶ್ರೀ ಕ್ಷೇತ್ರಕ್ಕೆ ಕಾರಿಂಜಕ್ಕೆ ಭೇಟಿ ನೀಡಲಿದ್ದಾರೆ. 

ಜಾಹೀರಾತು
ಜಾಹೀರಾತು
ಜಾಹೀರಾತು

ಗಣಿಗಾರಿಕೆಯಿಂದ ಹಾನಿಗೀಡಾಗಿರುವ ಕ್ಷೇತ್ರದ ಪರಿಸರ ವೀಕ್ಷಣೆಗೆ, ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ಜಗದ್ಗುರು ಮಧ್ವಾಚಾರ್ಯ ಮಹಾಸಂಸ್ಥಾನ ಕುಕ್ಕೆ ಸುಬ್ರಮಣ್ಯ, ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ ಗುರುಪುರ, ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣಿಲ, ಶ್ರೀ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಓಂ ಶ್ರೀ ಮಠ ಚಿಲಿಂಬಿ, ಶ್ರೀ ಶ್ರೀ ಮಾತಾಶ್ರೀ ಶಿವಜ್ಞಾನ ಮಹಿ ಓಂ ಶ್ರೀ ಮಠ ಚಿಲಿಂಬಿ ಸ್ವಾಮೀಜಿಗಳು ಬರಲಿದ್ದಾರೆ. ಎಂದು ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು