Recent Posts

Saturday, September 21, 2024
ಸುದ್ದಿಹಾಸನ

ಹಾಸನ: ಲಾರಿ – ಬೈಕ್ ನಡುವೆ ಭೀಕರ ಅಪಘಾತ: ಪೋಷಕರ ಎದುರಲ್ಲೇ ಮಕ್ಕಳ ಸಾವು – ಕಹಳೆ ನ್ಯೂಸ್

ಹಾಸನ: ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದು ಬೈಕ್ ನಲ್ಲಿ ತೆರಳುತ್ತಿದ್ದ, ಅವಳಿ ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ಹಾಸನದಲ್ಲಿ ನಡೆದಿದೆ.

ಅವಳಿ ಮಕ್ಕಳಾದ ಮೂರು ವರ್ಷದ ಪ್ರಣವ್ ಮತ್ತು ಪ್ರಣತಿ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿರುವ  ಪೋಷಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಲಾರಿ ಚಕ್ರಕ್ಕೆ ಸಿಲುಕಿ ಮಕ್ಕಳ ದೇಹಗಳು ಗುರುತು ಸಿಗದಷ್ಟು ಛಿದ್ರವಾಗಿವೆ. ಪರಾರಿಯಾಗಲೆತ್ನಿಸಿದ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದೆ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಹಾಸನ ಸಂಚಾರ ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಜಾಹೀರಾತು