Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಡಿ. 26 ಹಾಗೂ 27ರಂದು ನುಳಿಯಾಲು ತರವಾಡು ಶ್ರೀ ಧರ್ಮಚಾವಡಿಯ ಧರ್ಮ ನೇಮೋತ್ಸವ– ಕಹಳೆ ನ್ಯೂಸ್

ಪುತ್ತೂರು : ನಿಡ್ಪಳ್ಳಿ, ನುಳಿಯಾಲು ತರವಾಡು ಶ್ರೀ ಧರ್ಮಚಾವಡಿಯಲ್ಲಿ, ನುಳಿಯಾಲು ಪುರುಷೋತ್ತಮ ಆರ್.ಶೆಟ್ಟಿಯವರ ಸೇವಾರೂಪವಾಗಿ, ಡಿ.26 ಮತ್ತು 27ರಂದು ಧರ್ಮನೇಮೋತ್ಸವ ನಡೆಯಲಿದೆ.

ಡಿ. 26ರಂದು ನುಳಿಯಾಲು ತರವಾಡು ಮನೆಯಲ್ಲಿ ಪೂರ್ವಾಹ್ನ 8 ಗಂಟೆಯಿ0ದ ಗಣಹೋಮ, ನಾಗತಂಬಿಲ, 11:30ಕ್ಕೆ ಶ್ರೀ ವೆಂಕಟರಮಣ ದೇವರಿಗೆ ಹರಿಸೇವೆ, ಪ್ರಸಾದ ವಿತರಣೆ, ಮಧ್ಯಾಹ್ನ 1:30 ರಿಂದ ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ‘ಯಕ್ಷಗಾನ ನಾಟ್ಯವೈಭವ’ ಸಾಯಂಕಾಲ 4:30ಕ್ಕೆ ಭಂಡಾರ ಇಳಿಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಜೆ 6 ಗಂಟೆಯಿ0ದ ರಾಜನ್ ದೈವ ಪಿಲಿಭೂತಕ್ಕೆ ನೇಮ, ಜುಮಾದಿ, ಕಲ್ಲುರ್ಟಿ, ಪಂಜುರ್ಲಿ, ಮೂಕಾಂಬಿಕಾ ಗುಳಿಗ, ವರ್ಣಾರ ಪಂಜುರ್ಲಿ ದೈವಗಳಿಗೆ ನೇಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಿ.27ರಂದು ಉಷಃ ಕಾಲದಲ್ಲಿ ರಕ್ತೇಶ್ವರಿ ದೈವದ ನೇಮ, 9:30ಕ್ಕೆ ಧರ್ಮದೈವ ಬೀರ್ಣಾಳ್ವ ದೈವಕ್ಕೆ ನೇಮ ಗುಳಿಗ ದೈವದ ನೇಮ ನಡೆಯಲಿದೆ. ಡಿ.26 ರಿಂದ 27ರ ತನಕ ನಿರಂತರ ಅನ್ನಸಂತರ್ಪಣಾ ಸೇವೆ ನಡೆಯಲಿದೆ.