Recent Posts

Sunday, September 22, 2024
ಕ್ರೀಡೆದಕ್ಷಿಣ ಕನ್ನಡಸುದ್ದಿ

ರಾಷ್ಟಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಮಂಗಳೂರಿನ ಆರ್ನಾ ರಾಜೇಶ್ – ಕಹಳೆ ನ್ಯೂಸ್

ಮಂಗಳೂರು: ರೋಲರ್ ಸ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಡಿ.11ರಿಂದ 13 ರವರೆಗೆ ದೆಹಲಿಯಲ್ಲಿ ಆಯೋಜಿಸಿಲಾದ 59 ನೇ ರಾಷ್ಟಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮಂಗಳೂರಿನ ಆರ್ನಾ ರಾಜೇಶ್ ಎರಡು ಪದಕಗಳನ್ನು ಪಡೆದಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

5 ರಿಂದ 7 ವರ್ಷದೊಳಗಿನ ರಾಷ್ಟ್ರಮಟ್ಟದ ಇನ್ ಲೈನ್ ಸ್ಕೇಟಿಂಗ್ ನ ಬಾಲಕಿಯರ ವಿಭಾಗದಲ್ಲಿ ಅತಿ ಕಿರಿಯ ವಯಸ್ಸಿನಲ್ಲೇ ಕರ್ನಾಟಕವನ್ನು ಪ್ರತಿನಿಧಿಸಿದ ಆರ್ನಾ ರಾಜೇಶ್ ಮೂರು ಲ್ಯಾಪ್ ರಿಂಕ್ ರೇಸ್ ನಲ್ಲಿ ಬೆಳ್ಳಿ ಪದಕ ಹಾಗೂ ಎರಡು ಲ್ಯಾಪ್ ರಿಂಕ್ ರೇಸ್ ನಲ್ಲಿ ಕಂಚಿನ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಆರ್ನಾ ರಾಜೇಶ್ ಬಿಜೈ ಲೂಡ್ರ್ಸ್ ಸೆಂಟ್ರಲ್ ಸ್ಕೂಲ್ ನ 1 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕದ್ರಿ ಹಿಲ್ಸ್ ನಿವಾಸಿ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿ. ಮಂಗಳೂರಿನ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ಸದಸ್ಯೆಯಾಗಿದ್ದು,ತರಬೇತುದಾರರಾದ ಮೋಹನ್ ದಾಸ್.ಕೆ, ಜಯರಾಜ್ ಹಾಗೂ ರಮಾನಂದ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಬೆಂಗಳೂರಿನ ಕೋಚ್ ಪ್ರತೀಕ್ ರಾಜ ಅವರಿಂದ ಬೆಂಗಳೂರಿನಲ್ಲಿ ಹೆಚ್ಚಿನ ತರಬೇತಿ ಪಡೆಯುತ್ತಿದ್ದಾರೆ.