Recent Posts

Monday, January 20, 2025
ದಕ್ಷಿಣ ಕನ್ನಡಸುದ್ದಿ

ಕದ್ರಿ ಉತ್ತರ ವಾರ್ಡಿನ ಶರ್ಬತ್ ಕಟ್ಟೆ ಬಳಿಯ ಮಹಿಳಾ ಐ.ಟಿ.ಐ ಕಾಲೇಜಿಗೆ ತೆರಳುವ ಕಾಮಗಾರಿ ಪೂರ್ಣಗೊಂಡ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ವೇದವ್ಯಾಸ್ ಕಾಮತ್ – ಕಹಳೆ ನ್ಯೂಸ್

ಮಂಗಳೂರು: ಮಹಾನಗರ ಪಾಲಿಕೆಯ ಕದ್ರಿ ಉತ್ತರ ವಾರ್ಡಿನ ಶರ್ಬತ್ ಕಟ್ಟೆ ಬಳಿ ಮಹಿಳಾ ಐ.ಟಿ.ಐ ಕಾಲೇಜಿಗೆ ತೆರಳುವ ಕಾಂಕ್ರೀಟ್ ರಸ್ತೆ ಹಾಗೂ ಇಂಟರ್ ಲಾಕ್ ಅಳವಡಿಕೆಯ ಕಾಮಗಾರಿ ಪೂರ್ಣಗೊಂಡಿದ್ದು ಶಾಸಕ ವೇದವ್ಯಾಸ್ ಕಾಮತ್ ಅವರು ಉದ್ಘಾಸಿದರು.

ಉದ್ಘಾಟಿಸಿ ಬಳಿಕ ಮಾತನಾಡಿದ ಶಾಸಕರು ಮಹಿಳಾ ಐ.ಟಿ.ಐ ಕಾಲೇಜಿಗೆ ತೆರಳುವ ರಸ್ತೆಯ ಅಭಿವೃದ್ಧಿ ಕಾಮಗಾರಿ ಹಾಗೂ ಕಾಲೇಜು ಪರಿಸರದಲ್ಲಿ ಇಂಟರ್ ಲಾಕ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿಯನ್ನು ಪೂರ್ಣಗೊಳಿಸಲು ಸ್ಥಳೀಯ ಕಾರ್ಪೋರೇಟರ್ ಶಕಿಲಾ ಕಾವಾ ಅವರ ಮುತುವರ್ಜಿ ಮತ್ತು ಕಾಲೇಜು ಆಡಳಿತ ವ್ಯವಸ್ಥೆಯ ಸಹಕಾರದಿಂದ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ಶಕಿಲಾ ಕಾವಾ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ರಮೇಶ್ ಕಂಡೆಟ್ಟು,ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ರೂಪಾ ಡಿ ಬಂಗೇರ, ರಾಮಕೃಷ್ಣ, ಪ್ರಸನ್ನ, ಪ್ರವೀಣ್ ಗುಂಡಳಿಕೆ, ವಸಂತ್ ಜೆ ಪೂಜಾರಿ, ಗಾಯತ್ರಿ, ನಯನ ವಿಶ್ವನಾಥ, ಸಂತೋಷ್ ನಂತೂರು, ವೆಂಕಟೇಶ ಕದ್ರಿ, ಕಮಲಾಕ್ಷಿ, ಶ್ರೀಧರ್ ಶೆಟ್ಟಿ, ಶಿಲ್ಪ ಕಂಡೆಟ್ಟು, ರೋಶನಿ ಗುಂಡಳಿಕೆ, ಲಕ್ಷ್ಮಿ ಗುಂಡಳಿಕೆ, ವಸಂತ್ ಗುಂಡಳಿಕೆ, ದಿವಾಕರ್ ಶೆಣೈ, ಅಜಿತ್ ಗುಂಡಳಿಕೆ, ಹರೀಶ್ ಗುಂಡಳಿಕೆ, ನವೀನ್ ಗುಂಡಳಿಕೆ, ವೆಂಕಟ್ ಗುಂಡಳಿಕೆ, ಚಿನ್ನಪೇಪ, ಹರಿಣಾಕ್ಷ ಗುಂಡಳಿಕೆ, ಜಯ ಪ್ರಭ, ಕೂಸಪ್ಪ, ಶೀನ, ಕಾಲೇಜಿನ ಪ್ರಮುಖರಾದ ಬಾಲಕೃಷ್ಣ, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.