Recent Posts

Sunday, September 22, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ 20ನೇ ವರ್ಷದ ನವದಂಪತಿ ಸಮಾವೇಶ – ಕಹಳೆ ನ್ಯೂಸ್

ಕಲ್ಲಡ್ಕ : ನೂತನವಾಗಿ ಗೃಹಸ್ಥಾಶ್ರಮವನ್ನು ಪ್ರವೇಶಿಸಿದ ದಂಪತಿಗಳಿಗೆ ಆಯೋಜಿಸಿದ ಕಾರ್ಯಕ್ರಮ ನವದಂಪತಿ ಸಮಾವೇಶವು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆಯಿತು.

ಹಿರಿಯ ದಂಪತಿಗಳಾಗಿ ಭಾಗವಹಿಸಿದ ಕೃಷ್ಣಪ್ಪ ಹಾಗೂ ರಾಮಕ್ಕ ಅವರು ನವದಂಪತಿ ಸಮಾವೇಶವನ್ನು ಉದ್ಘಾಟಿಸಿ, ತಾವು ವೈವಾಹಿಕ ಜೀವನದಲ್ಲಿ ನಡೆದು ಬಂದ ಜೀವನದ ಅನುಭವವನ್ನು ನವದಂಪತಿಗಳಲ್ಲಿ ಹಂಚಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ|| ಪ್ರಭಾಕರ ಭಟ್ ಕಲ್ಲಡ್ಕ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ 16 ಸಂಸ್ಕಾರದಲ್ಲಿ ಮದುವೆ ಒಂದು ಉತ್ತಮವಾದ ಸಂಸ್ಕಾರ. ಸಂಜೆಯವರೆಗೂ ಹಿರಿಯರು ತಮ್ಮ ಅನುಭವದ ಮಾರ್ಗದರ್ಶನವನ್ನು ನೀಡಲಿದ್ದಾರೆ. ಅದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ರೀತಿಯಲ್ಲಿ ಬಾಳ್ವೆ ನಡೆಸಬೇಕೆಂದು ಹಾರೈಸಿದರು.

ಕುಟುಂಬ ಪ್ರಭೋದನ್ ಪ್ರಮುಖರಾದ ಗಜಾನನ ಪೈಯವರು ಗಂಡ-ಹೆಂಡತಿ ಇಬ್ಬರು ಸಮಾನರು ಇಬ್ಬರಲ್ಲಿ ಮೇಲು-ಕೀಳು ಎಂಬ ಭಾವನೆ ಇರದೇ ಪರಸ್ಪರ ಹೊಂದಾಣಿಕೆಯಿಂದ ಮುಂದುವರೆಸಿಕೊಂಡು ಹೋಗುವುದು ನಮ್ಮ ಧರ್ಮ ಎಂದು ಮಾರ್ಗದರ್ಶನ ಮಾಡಿದರು.

ಮದುವೆ ಒಂದು ಶ್ರೇಷ್ಠವಾದ ಜೀವನವಾಗಿದ್ದು, ದಾಂಪತ್ಯ ಜೀವನ ಭಾರತೀಯರ ಒಂದು ಹಿರಿಮೆಯಾಗಿದೆ. ಎಂದು ಕುಟುಂಬ ಪ್ರಭೋದನ್ ಸಹ ಸಂಯೋಜಕರಾದ ಸು.ರಾಮಣ್ಣ ನವದಂಪತಿ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

 

ಆಗಮಿಸಿದ ಎಲ್ಲಾ ನವದಂಪತಿಗಳಿಗೆ ಮಾತೆಯರು ಕಾಲಿಗೆ ನೀರು ಹಾಕಿ, ಆರತಿ ಬೆಳಗಿ, ಅರಶಿನ, ಕುಂಕುಮ ಹಚ್ಚಿ ಸ್ವಾಗತಿಸಿದರು. ಎಲ್ಲಾ ನವದಂಪತಿಗಳು ಘೃತಾಹುತಿ ಅರ್ಪಿಸಿ ಶಿಶುಮಂದಿರದ ಗುಹೆಯ ಮೂಲಕ ವೇದಘೋಷದೊಂದಿಗೆ ಸಭಾಂಗಣ ಪ್ರವೇಶಿದರು.

 

ವೇದಿಕೆಯಲ್ಲಿ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್ ಎನ್, ಡಾ. ಕಮಲಾ ಪ್ರಭಾಕರ ಭಟ್, ಎಲ್ಲಾ ವಿಭಾಗದ ಪ್ರಮುಖರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. Video : ಇಡ್ಕಿದು ಸೇವಾ ಸಹಕಾರಿ ಸಂಘ ನಿಯಮಿತ ಇದರ ಶತಮಾನೋತ್ಸವದ ನೂತನ ಕಟ್ಟಡ ‘ಶತಾಮೃತ’ ಉದ್ಘಾಟನೆ

ಶಿಶುಮಂದಿರದ ಮಾತೆಯರು ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸಿದರು, ರಾಜ್ಯದ ವಿವಿಧ ಭಾಗಗಳಿಂದ 82 ಜೋಡಿ ದಂಪತಿಗಳು ಭಾಗವಹಿಸಿದ್ದರು.

ಶ್ರೀಮತಿ ಶಾಂತಲಕ್ಷ್ಮೀ ಪ್ರಾರ್ಥಿಸಿ, ಶ್ರೀಮತಿ ಸುಧಾ ಭಟ್ ಸ್ವಾಗತಿಸಿದರು, ಶ್ರೀಮತಿ ಮಂಜುಳಾ ವಂದಿಸಿ, ಶ್ರೀಮತಿ ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.