Monday, January 20, 2025
ದಕ್ಷಿಣ ಕನ್ನಡಸುದ್ದಿ

ಉಪ್ಪಿನಂಗಡಿ ಠಾಣೆಯ ಪೋಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ರಕ್ಷಣೆ ನೀಡುತ್ತಿರುವ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯ ಮೇಲೆ ಕ್ರಮ ಕೈಗೊಳ್ಳಲು ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಬಜರಂಗದಳ ಮನವಿ – ಕಹಳೆ ನ್ಯೂಸ್

ಉಪ್ಪಿನಂಗಡಿಯಲ್ಲಿ ಡಿಸೆಂಬರ್ 14ರಂದು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ PFI – SDPIನ ಕಾರ್ಯಕರ್ತರು ಉಪ್ಪಿನಂಗಡಿ ಪೋಲೀಸ್ ಠಾಣೆಗೆ ನುಗ್ಗಿ, ಪೋಲೀಸರ ಮೇಲೆ ದಾಳಿ ನಡೆಸಿದ್ದು, ತಲವಾರು ಮಾರಕಾಸ್ತ್ರಗಳನ್ನು ಹಿಡಿದು ದಾಳಿಮಾಡಿ ಪೋಲೀಸರಿಗೆ ಹಲ್ಲೆನಡೆಸಿದ ಸಂಧರ್ಭದಲ್ಲಿ ಪೋಲೀಸರು ನಡೆಸಿದ ಲಾಠಿಚಾರ್ಜ್‍ನಲ್ಲಿ ಅಲ್ಪ ಸ್ವಲ್ಪ ಗಾಯಗೊಂಡ 25 ಕ್ಕೂ ಹೆಚ್ಚು PFI ಕಾರ್ಯಕರ್ತರು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ದಾಖಲಾದ ಎಲ್ಲಾ ಜನರ ಮೇಲೆ ಉಪಿನಂಗಡಿ ಪೋಲೀಸ್ ಠಾಣೆಯ ಪ್ರಕರಣದಲ್ಲಿ ಕೇಸು ದಾಖಲಾಗಿದೆ. ಆದರೆ ಸುಳ್ಳು ಆರೋಗ್ಯದ ನೆಪವೊಡ್ಡಿ ಆರೋಪಿಗಳಿಗೆ ಹೈಲ್ಯಾಂಡ್ ಆಸ್ಪತ್ರೆ ರಕ್ಷಣೆ ಕೊಡುತ್ತಿದ್ದು, ಪೋಲೀಸರಿಗೆ ಆರೋಪಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಒಪ್ಪಿಸಲು ನಿರಾಕರಿಸುತ್ತಿದೆ. ಪೋಲೀಸರ ಮೇಲೆ ಕೊಲೆ ನಡೆಸಲು ಹುನ್ನಾರ ನಡೆಸಿದ ಆರೋಪಿಗಳಿಗೆ ಹೈಲ್ಯಾಂಡ್ ಆಸ್ಪತ್ರೆಯ ಮಂಡಳಿ ರಕ್ಷಣೆ ಕೊಡುತ್ತಿದ್ದು ಆ ಆಸ್ಪತ್ರೆಯ ಮೇಲೆ ಕ್ರಮಕೈಗೊಳ್ಳಲುಪೋಲೀಸ್ ವರಿಷ್ಠಾಧಿಕಾರಿಯವರಿಗೆ ಬಜರಂಗದಳ ವತಿಯಿಂದ ಮನವಿ ನೀಡಲಾಯಿತು. ತಕ್ಷಣ ಆರೋಪಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಪೋಲೀಸರಿಗೆ ಒಪ್ಪಿಸದಿದ್ದಲ್ಲಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಬಜರಂಗದಳ ವಿಭಾಗ ಸಂಚಾಲಕ್ ಭುಜಂಗ ಕುಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು