Sunday, November 24, 2024
ಬೆಂಗಳೂರುರಾಜ್ಯಹೆಚ್ಚಿನ ಸುದ್ದಿ

ಕೊರೊನಾ ವೈರಸ್‌ನ ಆತಂಕದ ಹಿನ್ನಲೆ: ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ಮಾರ್ಗಸೂಚಿ: ಡಿ.30 ರಿಂದ ಜ.2 ವರೆಗೆ ನಿರ್ಬಂಧ: ಸಿ.ಎಂ ಬಸವರಾಜ ಬೊಮ್ಮಾಯಿ- ಕಹಳೆ ನ್ಯೂಸ್

ಬೆಳಗಾವಿ : “ಕೊರೊನಾ ವೈರಸ್‌ನ ಆತಂಕದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಹೊಸ ವರ್ಷಾಚರಣೆ ಹಾಗೂ ಕ್ರಿಸ್ ಮಸ್ ಆಚರಣೆಗೆ ಅವಕಾಶ ನೀಡಲಾಗಿದ್ದು, ಆದರೆ ಹೊಸವರ್ಷದ ಸಂಭ್ರಮಾಚರಣೆಗೆ ಬಹಿರಂಗವಾಗಿ ರಾಜ್ಯಾದ್ಯಂತ ಬಾರ್ ಹಾಗೂ ಪಬ್ ಗಳಲ್ಲಿ ಡಿಜೆಗೆ ಅವಕಾಶವಿಲ್ಲ” ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸುವರ್ಣ ಸೌಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ” ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ಈ ಹೊಸ ರೂಲ್ಸ್ ಜಾರಿಯಲ್ಲಿ ಇರಲಿದ್ದು, ಹೊಸವರ್ಷದ ಸಂಭ್ರಮಾಚರಣೆಗೆ ಮಾತ್ರ ಈ ನಿಯಮಗಳು ಅನ್ವಯವಾಗುತ್ತವೆ. ಆದರೆ ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಚರ್ಚ್‍ಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಯಾವುದೇ ರೀತಿಯ ನಿರ್ಬಂಧಗಳು ಇಲ್ಲ” ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

“ಈಗಿನ ಪರಿಸ್ಥಿತಿ ಅನುಸಾರ ತಜ್ಞರ ಶಿಫಾರಸ್ಸಿನಂತೆ , ಶೇ.50ರ ಮಿತಿಯನ್ನು ಜಾರಿಗೊಳಿಸಲಾಗಿದ್ದು, ಬಹಿರಂಗವಾಗಿ ಜನರು ಗುಂಪುಗೂಡಲು ನಿರ್ಬಂಧಿಸಲಾಗಿದೆ. ಕ್ರಿಸ್ ಮಸ್ ಸಂದರ್ಭದಲ್ಲಿ ಕೊರೋನಾ ಮುಂಜಾಗ್ರತಾ ಕ್ರಮದೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಆಚರಿಸಬೇಕು ಎಂದು ಮನವಿ ಮಾಡಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು