Friday, November 22, 2024
ಸುದ್ದಿ

ಬಿಡುಗಡೆಯಾದ ಪತಂಜಲಿ ಸಿಮ್ ವಿಶೇಷತೆ ಏನು ಗೊತ್ತಾ? – ಕಹಳೆ ನ್ಯೂಸ್

ಯೋಗಗುರು ಬಾಬಾ ರಾಮ್ದೇವ್ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಬಾಬಾ ರಾಮ್ದೇವ್ ಸ್ವದೇಶಿ ಸಮೃದ್ಧಿ ಸಿಮ್ ಕಾರ್ಡ್ ಬಿಡುಗಡೆ ಮಾಡಿದ್ದಾರೆ. ಪತಂಜಲಿ ಆಯುರ್ವೇದ ಹಾಗೂ ಬಿಎಸ್ಎನ್ಎಲ್ ಜಂಟಿಯಾಗಿ ಈ ಸಿಮ್ ಕಾರ್ಡ್ ಬಿಡುಗಡೆ ಮಾಡಿದೆ.

ಸದ್ಯ ಈ ಸಿಮ್ ನೌಕರರಿಗೆ ಮಾತ್ರ ಲಭ್ಯವಿದೆ. 144 ರೂಪಾಯಿ ರಿಚಾರ್ಜ್ ಮಾಡಿದಲ್ಲಿ ಬಳಕೆದಾರರಿಗೆ 2 ಜಿಬಿ ಡೇಟಾ ಹಾಗೂ ಅನಿಯಮಿತ ಕಾಲಿಂಗ್ ಸೇವೆ ಸಿಗಲಿದೆ. ಇದ್ರ ಜೊತೆಗೆ ಪತಂಜಲಿ ದಿನಕ್ಕೆ 100 ಎಸ್ಎಂಎಸ್ ಉಚಿತವಾಗಿ ನೀಡಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನೌಕರರಿಗೆ ಮಾತ್ರ ಲಭ್ಯವಿರುವ ಈ ಸಿಮ್ ಸದ್ಯದಲ್ಲಿಯೇ ಉಳಿದ ಗ್ರಾಹಕರಿಗೂ ಹಂಚಿಕೆಯಾಗಲಿದೆ. ಡೇಟಾ, ಎಸ್ಎಂಎಸ್ ಜೊತೆ ಪತಂಜಲಿ ಉತ್ಪನ್ನಗಳ ಮೇಲೆ ಶೇಕಡಾ 10ರಷ್ಟು ರಿಯಾಯಿತಿ ಗ್ರಾಹಕರಿಗೆ ಸಿಗಲಿದೆ. ಇಷ್ಟೇ ಅಲ್ಲ ಈ ಸಿಮ್ ಬಳಕೆದಾರರಿಗೆ 2.5 ಲಕ್ಷ ರೂಪಾಯಿಯವರೆಗೆ ವೈದ್ಯಕೀಯ ವಿಮೆ ಹಾಗೂ 5 ಲಕ್ಷ ರೂಪಾಯಿಯವರೆಗೆ ಲೈಫ್ ಇನ್ಶುರೆನ್ಸ್ ಸಿಗಲಿದೆ.

ಬಿಎಸ್ಎನ್ಎಲ್ ಹಾಗೂ ಪತಂಜಲಿ ಸ್ವದೇಶಿ ಕಂಪನಿಗಳಾಗಿದ್ದು, ಎರಡೂ ಸೇರಿ ದೇಶದ ಸೇವೆ ಮಾಡಲಿವೆ ಎಂದು ಬಾಬಾ ರಾಮ್ದೇವ್ ಹೇಳಿದ್ದಾರೆ.