Monday, January 20, 2025
ದಕ್ಷಿಣ ಕನ್ನಡಪುತ್ತೂರುಬಂಟ್ವಾಳಸುದ್ದಿ

ಜಿಲ್ಲಾಮಟ್ಟದಲ್ಲಿ‌ ಸೇವಾಕ್ರಾಂತಿಗೆ ಮುನ್ನುಡಿಯಿಟ್ಟಿದೆ 2021 ರ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಯುವಶಕ್ತಿ ತಂಡ-ಕಹಳೆ ನ್ಯೂಸ್

ಯುವಶಕ್ತಿ ರಕ್ತನಿಧಿ ,ಯುವಶಕ್ತಿ ಉದ್ಯೋಗನಿಮಿತ್ತಂ ಬಳಿಕ ಇದೀಗ ಅಶಕ್ತರ ಕಣ್ಣೀರು ಒರೆಸಿ ಸಹಾಯಹಸ್ತ ಚಾಚುವ ಸೇವಾಯೋಜನೆಗಳನ್ನು ಕೈಗೊಂಡು ಬಡವರ ಸೇವೆಗಾಗಿ ಯುವಶಕ್ತಿ ಸೇವಾಪಥ ಸಿದ್ದಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

“ಪರೋಪಕಾರಾರ್ಥಂ ಇದಂ ಶರೀರಂ” ಎಂಬ ಧ್ಯೇಯದೊಂದಿಗೆ ‘ಯುವಶಕ್ತಿ ಸೇವಾಪಥ’ದ ನೂತನ ಲೋಗೋ ಶ್ರೀ ಕ್ಷೇತ್ರದ ಕಾರಿಂಜೇಶ್ವರನ ಸನ್ನಿಧಿಯಲ್ಲಿ ನಾಗಾಸಾಧು ಶ್ರೀ ಬಾಬಾವಿಠಲಗಿರಿ‌ ಮಹಾರಾಜರ ದಿವ್ಯಹಸ್ತದಿಂದ ಲೋಕಾರ್ಪಣೆಗೊಂಡಿದ್ದು ದೇವಸ್ಥಾನದ ಆಡಳಿತ ವರ್ಗ,ಅರ್ಚಕವೃಂದ,ಸಂಘಟನೆಗಳ ಪ್ರಮುಖರು,ಹಿರಿಯರು,ಕಾರ್ಯಕರ್ತ ಮಿತ್ರರು ಉಪಸ್ಥಿತರಿದ್ದು ಶುಭಹಾರೈಸಿದರು.ಪ್ರತೀ ತಾಲೂಕಿನಲ್ಲಿ ಟೀಂ ಸೇವಾಪಥ ಕಾರ್ಯನಿರ್ವಹಿಸುವ ಜೊತೆಗೆ
ಜಿಲ್ಲೆಯ ಹತ್ತುಹಲವು ಸಂಘಸಂಸ್ಥೆಗಳು ಸೇವಾಪಥದೊಂದಿಗೆ ಕೈಜೋಡಿಸಲಿದ್ದು ಸಮಾಜಕಾರ್ಯಕ್ಕಾಗಿ ಸಜ್ಜಾಗಿದೆ..