Recent Posts

Monday, January 20, 2025
ಉಡುಪಿರಾಜಕೀಯರಾಜ್ಯಸುದ್ದಿ

ಯುವತಿಯರ ಮದುವೆ ವಯಸ್ಸು 21ಕ್ಕೆ ಏರಿಕೆ ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಅಲ್ಲ: ಉಡುಪಿಯಲ್ಲಿ ಶೋಭಾ ಕರಂದ್ಲಾಜೆ – ಕಹಳೆ ನ್ಯೂಸ್

ಉಡುಪಿ: ದೇಶದಲ್ಲಿ ಹೆಣ್ಣು ಮಕ್ಕಳ ಮದುವೆ ವಯಸ್ಸು 18 ರಿಂದ 21ಕ್ಕೆ ಏರಿಕೆ ಮಾಡಿರುವ ಕಾನೂನು ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಕಾನೂನು ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಅಲ್ಲ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮದುವೆ ವಯಸ್ಸು 21ಕ್ಕೆ ಏರಿಸಿರುವ ಕೇಂದ್ರ ಸರ್ಕಾರ ನಿರ್ಧಾರಕ್ಕೆ ಇತ್ತೀಚಿಗೆ ಸ್ವರ್ಣವಲ್ಲಿ ಮಠದ ಸ್ವಾಮೀಜಿ ಉಡುಪಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಮದುವೆ ವಯಸ್ಸಿಗೂ ಜನಸಂಖ್ಯೆಗೆ ಸಂಬಂಧ ಇಲ್ಲ. ವಯಸ್ಸು 21 ಆದರೆ ಯುವತಿಯ ಪದವಿ ಆಗಿರುತ್ತದೆ ಆ ವಯಸ್ಸಿಗೆ ಪ್ರಭುದ್ಧತೆ ಬಂದಿರುತ್ತದೆ. ವಯಸ್ಸು 22 ಆಗುವ ಮೊದಲು ಯಾರು ಮದುವೆ ಮಾಡಬಾರದು. ಇಡೀ ದೇಶದಲ್ಲಿ 18ನೇ ವಯಸ್ಸಿಗೆ ಮದುವೆ ಮಾಡಬಹುದು ಎಂಬ ಅಭಿಪ್ರಾಯ ತಪ್ಪು ಎಂದರು. 

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಕಾನೂನನ್ನು ದೇಶದ ಎಲ್ಲರೂ ಪಾಲನೆ ಮಾಡಬೇಕು. ತಾಯಿ ಮಗುವಿನ ಮರಣಪ್ರಮಾಣ ತಡೆಯಲು ಈ ನಿರ್ಧಾರ ಮಾಡಲಾಗಿದೆ. ವೈಜ್ಞಾನಿಕ ವರದಿ ಪರಿಶೀಲನೆ ಮಾಡಿಯೇ ಕೇಂದ್ರ ಈ ನಿರ್ಧಾರಕ್ಕೆ ಬಂದಿದೆ ಎಂದು ಮಾಹಿತಿ ಹಂಚಿಕೊಂಡರು