Monday, January 20, 2025
ದಕ್ಷಿಣ ಕನ್ನಡಸುದ್ದಿ

ಡಿಸೆಂಬರ್ 25ರಂದು ಧೂಳೆಬ್ಬಿಸಲಿದೆ ‘ಶ್ರೀರಾಮ ಟ್ರೋಫಿ 2021’ : ಶ್ರೀ ರಾಮ ಕ್ರಿಕೆಟರ್ಸ್, ಅಲ್ಲಿಪಾದೆ ಆಶ್ರಯದಲ್ಲಿ ನಿಗದಿತ ಓವರ್‌ ಗಳ 8 ಜನರ ಹೊನಲು ಬೆಳಕಿನ ಸೂಪರ್‌ಸಿಕ್ಸ್ ಕ್ರಿಕೆಟ್ ಪಂದ್ಯಾಟ, -ಕಹಳೆ ನ್ಯೂಸ್

ಶ್ರೀ ರಾಮ ಕ್ರಿಕೆಟರ್ಸ್, ಅಲ್ಲಿಪಾದೆ ಇದರ ಆಶ್ರಯದಲ್ಲಿ ನಿಗದಿತ ಓವರ್‌ ಗಳ 8 ಜನರ ಹೊನಲು ಬೆಳಕಿನ ಸೂಪರ್‌ಸಿಕ್ಸ್ ಕ್ರಿಕೆಟ್ ಪಂದ್ಯಾಟ, ‘ಶ್ರೀರಾಮ ಟ್ರೋಫಿ 2021’ ಅಲ್ಲಿಪಾದೆಯ ಶ್ರೀ ರಾಮ ಕ್ರೀಡಾಂಗಣದಲ್ಲಿ, ಇದೇ ಡಿಸೆಂಬರ್ 25ರಂದು ನಡೆಯಲಿದೆ. 1000 ಪ್ರವೇಶ ಶುಲ್ಕವಾಗಿದ್ದು, ಪಂದ್ಯಾಟದಲ್ಲಿ ಭಾಗವಹಿಸಿದ ನಾಲ್ಕು ತಂಡಕ್ಕೆ ಬಹುಮಾನವನ್ನ ನೀಡಲಾಗುವುದು. ಪ್ರಥಮ ಬಹುಮಾನವಾಗಿ 10,000 ನಗದು ಹಾಗೂ ಶ್ರೀರಾಮ ಟ್ರೋಫಿ, ದ್ವಿತೀಯ ಬಹುಮಾನವಾಗಿ 6000 ನಗದು ಹಾಗೂ ಶ್ರೀರಾಮ ಟ್ರೋಫಿ, ತೃತೀಯ ಬಹುಮಾನವಾಗಿ 1000 ನಗದು ಹಾಗೂ ಶ್ರೀರಾಮ ಟ್ರೋಫಿ, ಚತುರ್ಥ ಬಹುಮಾನವಾಗಿ 1000 ನಗದು ಹಾಗೂ ಶ್ರೀರಾಮ ಟ್ರೋಫಿ ನೀಡಲಾಗುವುದು, ಇನ್ನು ಉತ್ತಮ ಎಸೆತಗಾರ, ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಕ್ರಿಕೆಟ್ ಪಂದ್ಯಾಟದಲ್ಲಿ ಕೆಲವು ನಿಬಂಧನೆಗಳನ್ನ ಹಾಕಲಾಗಿದ್ದು, ಲೆಕ್‍ಸ್ಪಿನ್‍ಗೆ ಮಾತ್ರ ಅವಕಾಶ, ಪಂದ್ಯಾಟದಲ್ಲಿ ಟೈ ಆದಲ್ಲಿ ನಾಣ್ಯ ಚಿಮ್ಮುಗೆಯ ಮೂಲಕ ವಿಜಯೀ ತಂಡದ ಫೋಷಣೆ, ಅಂಪೈರ್ ಮತ್ತು ವ್ಯವಸ್ಧಾಪಕರ ತೀರ್ಮಾನ ಅಂತಿಮ, ಚರ್ಚೆ ಬಂದಲ್ಲಿ ತಂಡದ ಕಪ್ತಾನನಿಗೆ ಮಾತ್ರ ಮಾತನಾಡಲು ಅವಕಾಶ, ಕೋವೀಡ್ 12 ತಡೆಗಟ್ಟಲು ಸರಕಾರ ಕೈಗೊಂಡಿರುವ ನಿಯಮಗಳನ್ನು ಅನುಸರಿಸಿ ಪಂದ್ಯಾಟ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು