Recent Posts

Monday, January 20, 2025
ಆರೋಗ್ಯರಾಜ್ಯಸುದ್ದಿ

ರಾಜ್ಯದಲ್ಲಿ ಮುಂದುವರಿದ ಓಮಿಕ್ರಾನ್‌ ಸ್ಫೋಟ ; ಇಂದು ಒಂದೇ ದಿನ 12 ಪ್ರಕರಣ ದೃಢ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ ರೂಪಾಂತರಿ ಓಮಿಕ್ರಾನ್‌ ಹಾವಳಿ ಮುಂದುವರಿದಿದೆ. ಇಂದು ಒಂದೇ ದಿನ 12 ಓಮಿಕ್ರಾನ್‌ ಸೋಂಕು ಪ್ರಕರಣಗಳು ವರದಿಯಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರು ಒಂದರಲ್ಲೇ 10 ಓಮಿಕ್ರಾನ್‌ ಸೋಂಕು ಪ್ರಕರಣಗಳು ವರದಿಯಾಗಿವೆ. ಮೈಸೂರಿನಲ್ಲಿ ಮೊದಲ ಬಾರಿಗೆ ಓಮಿಕ್ರಾನ್‌ ಕಾಣಿಸಿಕೊಂಡಿದ್ದು, ವಿದೇಶದಿಂದ ಬಂದಿದ್ದ 9 ವರ್ಷದ ಬಾಲಕಿಯಲ್ಲಿ ಸೋಂಕು ಪತ್ತೆಯಾಗಿದೆ. ಮಂಗಳೂರಿನಲ್ಲಿ 27 ವರ್ಷದ ಯುವಕನಿಗೆ ಸೋಂಕು ತಗುಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಿ.14ರಂದು ಬ್ರಿಟನ್‌ನಿಂದ ವಾಪಸ್ಸಾಗಿದ್ದ ಬೆಂಗಳೂರಿನ ಮಹಿಳೆಗೆ ಓಮಿಕ್ರಾನ್‌ ತಗುಲಿತ್ತು. ನಂತರ ಮಹಿಳೆ ಕುಟುಂಬದ ನಾಲ್ವರಿಗೂ ಸೋಂಕು ತಗುಲಿದೆ.

ರಾಜ್ಯದಲ್ಲಿ ಒಟ್ಟು ಓಮಿಕ್ರಾನ್‌ ಸೋಂಕು ಪ್ರಕರಣಗಳ ಸಂಖ್ಯೆ 31 ಕ್ಕೇರಿದೆ.