Recent Posts

Sunday, January 19, 2025
ದಕ್ಷಿಣ ಕನ್ನಡಸುದ್ದಿ

ಘಾನಾದಿಂದ ಮಂಗಳೂರಿಗೆ ಆಗಮಿಸಿದ ವ್ಯಕ್ತಿಯಲ್ಲಿ ಓಮಿಕ್ರಾನ್ ದೃಢ…! – 27 ಮಂದಿಯನ್ನ ಕ್ವಾರಂಟೈನ್‍ನಲ್ಲಿ ಇರಿಸಿದ ಜಿಲ್ಲಾಡಳಿತ…! –ಕಹಳೆ ನ್ಯೂಸ್

ಮಂಗಳೂರು: ಘಾನಾದಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಯಲ್ಲಿ ಓಮಿಕ್ರಾನ್ ದೃಢಪಟ್ಟಿದೆ. ಹೈರಿಸ್ಕ್ ದೇಶಗಳ ಪಟ್ಟಿಯಲ್ಲಿದ್ದ ಘಾನಾದಿಂದ ಮಂಗಳೂರಿಗೆ ವ್ಯಕ್ತಿಯೊಬ್ಬರು ಆಗಮಿಸಿದ್ದು, ಇವರಲ್ಲಿ ರೂಪಾಂತರಿ ಓಮಿಕ್ರಾನ್ ವೈರಸ್ ಪತ್ತೆಯಾಗಿದೆ. ಇವರು ಘಾನಾದಿಂದ ಕುವೈಟ್ ಮೂಲಕ ಡಿ.17ರಂದು ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಖಂಖಿ ಪರೀಕ್ಷೆ ನಡೆಸಿದಾಗ ಕೊರೊನಾ ಪಾಸಿಟಿವ್ ಬಂದಿದೆ. ಬಳಿಕ ಜಿಲ್ಲಾಡಾಳಿತ ವ್ಯಕ್ತಿಯ ಸ್ಯಾಂಪಲ್‍ನ್ನು ಜಿನೊಮಿಕ್ ಸೀಕ್ವೆನ್ಸ್ ಟೆಸ್ಟ್‍ಗೆ ಕಳುಹಿಸಿತ್ತು. ಇದಿಗ ಈ ವ್ಯಕ್ತಿಯನ್ನ ಆರೋಗ್ಯ ಇಲಾಖೆ ಅಧಿಕಾರಿಗಳು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸೋಲೇಷನ್‍ನಲ್ಲಿಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಈ ವ್ಯಕ್ತಿ ಪ್ರಯಾಣಿಸಿದ ವಿಮಾನದಲ್ಲಿದ್ದ 27 ಮಂದಿ ಸಹ ಪ್ರಯಾಣಿಕರನ್ನು ಗುರುತಿಸಿ ಖಖಿPಅಖ ಟೆಸ್ಟ್‍ಗೆ ಒಳಪಡಿಸುವ ಕೆಲಸವನ್ನ ಜಿಲ್ಲಾಡಾಳಿತ ಮಾಡಿದ್ದು, ಎಲ್ಲಾ 27 ಮಂದಿಯನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು