Saturday, November 23, 2024
ಸುದ್ದಿ

ಮಂಗಳೂರಿನಲ್ಲಿ ಭವ್ಯ ಹಿಂದೂ ಐಕ್ಯತಾ ಮೆರವಣಿಗೆ ; ಹಿಂದೂರಾಷ್ಟ್ರದ ಪ್ರೇರಣಾಸ್ಥಾನ, ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಜನ್ಮೋತ್ಸವ – ಕಹಳೆ ನ್ಯೂಸ್

ಮಂಗಳೂರು : ಹಿಂದೂರಾಷ್ಟ್ರದ ಪ್ರೇರಣಾಸ್ಥಾನ, ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಜನ್ಮೋತ್ಸವದ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯ ವತಿಯಿಂದ ಸಾಯಂಕಾಲ ಮಂಗಳೂರಿನ ಜ್ಯೂಸ್ ಜಂಕ್ಷನ್ ಬಲ್ಮಠದಿಂದ ಹಿಂದೂ ಐಕ್ಯತಾ ಮೆರವಣಿಗೆ ನಡೆಸಲಾಯಿತು. ಶಂಖನಾದ ಮಾಡುವ ಮೂಲಕ ಮೆರವಣಿಗೆ ಆರಂಭಗೊಂಡು ಲಾಲ್ ಬಾಗ್ ವೃತ್ತದವರೆಗೆ ನಡೆಯಿತು. ಮೆರವಣಿಗೆಯ ಮುಕ್ತಾಯವನ್ನು ಸಭಾ ಕಾರ್ಯಕ್ರಮದ ಮೂಲಕ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂ ಸಂಘಟನೆ, ಧರ್ಮ ಪ್ರಸಾರ, ಧರ್ಮ ರಕ್ಷಣೆ, ಹಿಂದೂರಾಷ್ಟ್ರದ ನಿರ್ಮಾಣಕ್ಕಾಗಿ ಮತ್ತು ಸಾಧಕರ ಆಧ್ಯಾತ್ಮಿಕ ಪ್ರಗತಿಗಾಗಿ ಅವಿರತವಾಗಿ ಕಾರ್ಯನಿರತ ಸನಾತನ ಸಂಸ್ಥೆಯ ಸಂಸ್ಥಾಪಕರು ಡಾ. ಜಯಂತ ಆಠವಲೆಯವರ 76ನೇ ಜನ್ಮೋತ್ಸವ ನಿಮಿತ್ತ ಮಂಗಳೂರಿನಲ್ಲಿ ಹಿಂದೂ ಐಕ್ಯತೆ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಮಂಗಳೂರಿನ ಹಿಂದುತ್ವನಿಷ್ಠರು, ಹಿಂದೂ ಆಧ್ಯಾತ್ಮಿಕ ಸಂಸ್ಥೆಗಳು, ಧಾರ್ಮಿಕ ಸಂಘಟನೆಗಳು, ಯುವಕ ಸಂಘಟನೆಗಳು, ಮಹಿಳಾ ಸಂಘಟನೆಗಳು, ಭಜನಾ ತಂಡಗಳು, ಚೆಂಡೆ-ವಾದ್ಯ, ಕಹಳೆ ನಾದದೊಂದಿಗೆ ಭಾಗವಹಿಸಿದ್ದವು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೂವುಗಳಿಂದ ಶೃಂಗಾರಗೊಂಡ ತೆರೆದ ವಾಹನದಲ್ಲಿ ಪರಾತ್ಪರ ಗುರುಗಳಾದ ಡಾ ಜಯಂತ ಆಠವಲೆಯವರ ಛಾಯಾಚಿತ್ರವನ್ನು ಆಕರ್ಷಕವಾಗಿ ಇರಿಸಲಾಗಿತ್ತು. ದಾರಿಯುದ್ದಕ್ಕೂ ಧರ್ಮಪ್ರೇಮಿಗಳು ಗುರುಗಳ ಛಾಯಾಚಿತ್ರಕ್ಕೆ ಪುಷ್ಪವೃಷ್ಟಿ ಮಾಡಿದರು.

ಸ್ವಸಂರಕ್ಷಣೆಗಾಗಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರಾಠೆ, ಲಾಠಿ ಇವುಗಳ ಪ್ರಾತ್ಯಕ್ಷಿಕೆಯನ್ನು ಮಾಡಲಾಯಿತು.

ಸಭಾ ಕಾರ್ಯಕ್ರಮದ ಮೂಲಕ ಮೆರವಣಿಗೆಯ ಮುಕ್ತಾಯ :
ವಿಶ್ವಕಲ್ಯಾಣಕ್ಕಾಗಿ ಕಾರ್ಯನಿರತ ಸತ್ತ್ವಗುಣಿ ಜನರ ರಾಷ್ಟ್ರವೇ ಹಿಂದೂರಾಷ್ಟ್ರವಾಗಿರುವುದು.
– ಶ್ರೀ. ಗುರುಪ್ರಸಾದ ಗೌಡ, ಕರ್ನಾಟಕ ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ.
‘ಭಾರತೀಯ ಋಷಿ ಮುನಿಗಳ ಘೋಷಣೆಯು ‘ಕೃಣ್ವಂತೋ ವಿಶ್ವಮ್ ಆರ್ಯಮ್’ ಅಂದರೆ ಇಡೀ ವಿಶ್ವವನ್ನು ಸುಸಂಸ್ಕøತವನ್ನಾಗಿಸೋಣ ಎಂಬುದಾಗಿತ್ತು.ಅಧ್ಯಾತ್ಮದ ಅಧಿಕಾರಿ ವ್ಯಕ್ತಿಯಾಗಿರುವ ಪರಾತ್ಪರ ಗುರು ಡಾ ಜಯಂತ ಆಠವಲೆಯವರು ಮೊತ್ತಮೊದಲು 1998 ರಲ್ಲಿ ಭಾರತ ವರ್ಷವು 2023 ರಲ್ಲಿ ಈಶ್ವರೀ ರಾಜ್ಯ ಅಂದರೆ ಹಿಂದೂರಾಷ್ಟ್ರ ಸ್ಥಾಪನೆಯಾಗುವುದು. ಎಂಬ ವಿಚಾರವನ್ನು ದೂರದೃಷ್ಟಿಯಿಂದ ಮಂಡಿಸಿದ್ದರು. ಪರಾತ್ಪರ ಗುರುಗಳು ಹಿಂದೂರಾಷ್ಟ್ರಕ್ಕೆ ಸಂಬಂಧಿಸಿದಂತಹ ಹಲವಾರು ಗ್ರಂಥಗಳನ್ನು ನಿರಂತರವಾಗಿ ಬರೆಯುತ್ತಿದ್ದಾರೆ. ಈ ವಿಚಾರಗಳು ಮುಂಬರುವ ಕಾಲದಲ್ಲಿ ಆಗಲಿರುವ ಆದರ್ಶ ರಾಷ್ಟ್ರ ರಚನೆ ಅಂದರೆ ಧರ್ಮಸಂಸ್ಥಾಪನೆಯ ಬೀಜವಾಗಿರಲಿದೆ. ಹಾಗಾಗಿ ಪರಾತ್ಪರ ಗುರು ಡಾ ಆಠವಲೆಯವರಂತಹ ಮಹಾನ್ ಸಂತರು ಹೇಳಿರುವ ಮಾರ್ಗವನ್ನು ಅನುಸರಿಸಿ ನಾವು ಮಾಡುವುದು ನಮ್ಮ ಭಾಗ್ಯವೇ ಆಗಿದೆ.
ಮಾನ್ಯ ಇಂದಿರಾ ಗಾಂಧಿಯವರು 1976 ರಲ್ಲಿ 42 ನೇ ಬಾರಿ ಸಂವಿಧಾನ ತಿದ್ದುಪಡಿ ಮಾಡಿ ಸಂವಿಧಾನದಲ್ಲಿ ಧರ್ಮನಿರಪೇಕ್ಷ ಮತ್ತು ಸಮಾಜವಾದ ಎಂಬ ಶಬ್ದಗಳನ್ನು ಸೇರಿಸಿದರು. ಸಂವಿಧಾನವನ್ನು ತಿದ್ದುಪಡಿ ಮಾಡಿ ಭಾರತವನ್ನು ಧರ್ಮನಿರಪೇಕ್ಷ ಮಾಡುವುದಾದರೆ ಇಂತಹ ಸಂವಿಧಾನ ತಿದ್ದುಪಡಿಯಾಗಿ ಹಿಂದೂರಾಷ್ಟ್ರವೆಂದು ಘೋಷಣೆ ಮಾಡುವುದು ಸಾಧ್ಯವಿಲ್ಲವೇ ? ಆದ್ದರಿಂದ ನಾವೆಲ್ಲರೂ ಅಖಿಲ ಮಾನವ ಜಾತಿಯ ಕಲ್ಯಾಣವನ್ನು ಬಯಸುವ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಯತ್ನಿಸೋಣ’ ಎಂದರು.

ಭಾರತೀಯ ಋಷಿ ಮುನಿಗಳ ಘೋಷಣೆಯು ಕೃಣ್ವಂತೋ ವಿಶ್ವಮ್ ಆರ್ಯಮ್ ಅಂದರೆ ಇಡೀ ವಿಶ್ವವನ್ನು ಸುಸಂಸ್ಕøತವನ್ನಾಗಿಸೋಣ ಎಂಬುದಾಗಿತ್ತು.
ರಣರಾಗಿಣಿಯ ವಕ್ತಾರರಾದ ಸೌ. ಲಕ್ಷ್ಮೀ ಪೈ ಇವರು ಪರಾತ್ಪರ ಗುರು ಡಾ ಜಯಂತ ಆಠವಲೆಯವರ ಅದ್ವಿತೀಯ ಕಾರ್ಯದ ಬಗ್ಗೆ ಮಾತನಾಡಿದರು. ಧರ್ಮಪ್ರೇಮಿ ಮಧುಸೂಧನ್ ಅಯ್ಯರ್ ಈ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ವಿವೇಕ ಪೈ ಕಾರ್ಯಕ್ರಮದ ನಿರೂಪಣೆ ಮಾಡಿದರು.