Recent Posts

Saturday, September 21, 2024
ದಕ್ಷಿಣ ಕನ್ನಡಸುದ್ದಿ

ಬೈಕ್‍ನಲ್ಲಿ ರನ್ ಆಫ್ ಕಛ್‍ನತ್ತ ಹೊರಟ ಮಂಗಳೂರಿನ ಯುವತಿಯರು- ಕಹಳೆ ನ್ಯೂಸ್

ಮಂಗಳೂರು : ಎಲ್ಲರಿಗೂ ಒಂದೊಂದು ರೀತಿಯ ಆಸೆಗಳಿರುತ್ತದೆ. ಅದೇ ರೀತಿ ಮಂಗಳೂರಿನ ಈ ಯುವತಿಯರಿಗೆ ದೇಶ ಸುತ್ತಬೇಕೆಂಬ ಆಸೆ, ಅದೂ ಬೈಕ್‍ನಲ್ಲೇ. ಹುಡುಗರು ಬೈಕ್ ಮೇಲೆ ನಾಲ್ಕು ಬ್ಯಾಗ್ ಏರಿಸಿ ದೇಶ ಸುತ್ತುತ್ತಾರೆ. ನಮಗ್ಯಾಕೆ ಆಗಲ್ಲ ಅಂತಾ ನಿರ್ಧರಿಸಿದ ಯುವತಿಯರು ಈಗ ಬೈಕ್ ಮೇಲೆ ಬ್ಯಾಗ್ ಹಾಕಿ ಹೊರಟು ನಿಂತಿದ್ದಾರೆ.


ಮಂಗಳೂರಿನ ಕೀರ್ತಿ ಉಚ್ಚಿಲ್, ಪೂಜಾ ಜೈನ್, ದಿವ್ಯಾ ಪೂಜಾರಿ, ಅಪೂರ್ವ ಮಂಗಳೂರಿನಿಂದ ರನ್ ಆಫ್ ಕಛ್‍ಗೆ ಬೈಕ್‍ನಲ್ಲಿ ಹೊರಟ ಯುವತಿಯರಾಗಿದ್ದಾರೆ. 2015ರಲ್ಲಿ ಆರಂಭವಾದ ಮಹಿಳಾ ಬೈಕರ್ಸ್‍ಗಳು ಮಾತ್ರ ಇರುವ ಮಂಗಳೂರು ಬೈಕರ್ನಿ ಗ್ರೂಪಿನ ಸದಸ್ಯರಾಗಿರುವ ಇವರು ಈಗ ಮಂಗಳೂರಿನಿಂದ ಗುಜರಾತ್‍ನ ರನ್ ಆಫ್ ಕಛ್‍ಗೆ ಹೊರಟಿದ್ದಾರೆ..

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಿನ ಕೆಪಿಟಿಯಿಂದ ಹೊರಟ ಯುವತಿಯರು 11 ದಿನಗಳ ಕಾಲ ಬೈಕ್ ಯಾತ್ರೆ ಮಾಡಲಿದ್ದು, ಸುಮಾರು ಎರಡು ಸಾವಿರ ಕಿಲೋಮೀಟರ್ ದೂರವನ್ನು ಈ ಯುವತಿಯರು ಬೈಕ್‍ನಲ್ಲಿ ಪ್ರಯಾಣಿಸಲಿದ್ದಾರೆ.

ಜಾಹೀರಾತು

ಈ ಹಿಂದೆ ಕನ್ಯಾಕುಮಾರಿ, ರಾಮೇಶ್ವರ, ಊಟಿ, ಕೊಯಮತ್ತೂರು ಸೇರಿದಂತೆ ದಕ್ಷಿಣದ ಹಲವು ಭಾಗಗಳಿಗೆ ಭೇಟಿ ನೀಡಿದ್ದರು ಕೀರ್ತಿ ಉಚ್ಚಿಲ್ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಮಂಗಳೂರು ಬೈಕರ್ನಿ ಕ್ಲಬ್‍ನ ಸ್ಥಾಪಕರೂ ಆಗಿದ್ದಾರೆ. ಇನ್ನು ಪೂಜಾ ಜೈನ್ ಕರಾಟೆ ಪಟುವಾಗಿದ್ದು, ಮಂಗಳೂರಿನ ಸ್ವಂತ ಜವಳಿ ಮಳಿಗೆಯನ್ನು ಹೊಂದಿದ್ದಾರೆ. ದಿವ್ಯಾ ಪೂಜಾರಿ ಮೆಡಿಕಲ್ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸಿದರೆ, ಅಪೂರ್ವ ಸಾಫ್ಟ್‍ವೇರ್ ಇಂಜಿನಿಯರ್ ಆಗಿದ್ದು, ಇವರಿಗೆ ಆರು ವರ್ಷದ ಮಗನೂ ಇದ್ದಾನೆ . ಒಟ್ಟು ಹನ್ನೊಂದು ದಿನದ ಬೈಕ್ ರೈಡ್ ಇದಾಗಿದ್ದು, ಡಿ.29ರ ಬೆಳಗ್ಗೆ ರನ್ ಆಫ್ ಕಛ್‍ನ್ನು ತಲುಪಲಿದ್ದು, ಮತ್ತೆ ಡಿ.30ರ ಬೆಳಗ್ಗೆ ಮಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ.