Tuesday, January 21, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಇಂದು ನಡೆದ ಶಿವಪ್ರೆಂಡ್ಸ್ ಕುರಾಯ-ಖಂಡಿಗ 5 ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ – ಕಹಳೆ ನ್ಯೂಸ್

ಶಿವಪ್ರೆಂಡ್ಸ್ ಕುರಾಯ-ಖಂಡಿಗ ಮೈರೋಳ್ತಡ್ಕ-ಬಂದಾರು ಆಶ್ರಯದಲ್ಲಿ 5ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಇಂದು ಶಿವಪ್ರೆಂಡ್ಸ್ ಕ್ರೀಡಾಂಗಣ ಖಂಡಿಗದಲ್ಲಿ ನಡೆಯಿತು. ಪಂದ್ಯಾಟವನ್ನು ರಘುಪತಿ ಭಟ್ ಅಣಬೆ ಅವರು ಉದ್ಘಾಟಿಸಿದ್ರು. ಪ್ರಗತಿಪರ ಕೃಷಿಕ ಸುಂದರ ಗೌಡರ ಅಧ್ಯಕ್ಷತೆಯಲ್ಲಿ ನಡೆಯುವ ಪಂದ್ಯಾಟದಲ್ಲಿ, ಸ.ಹಿ.ಪ್ರಾ.ಶಾಲೆ ಮೈರೋಳ್ತಡ್ಕ ಶಿಕ್ಷಕರಾದ ಮಾಧವ ಗೌಡ, ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶಂಕರ್ ರಾವ್, ಬಂದಾರು ಗ್ರಾ.ಪಂ ಸದಸ್ಯರಾದ ದಿನೇಶ ಗೌಡ ಖಂಡಿಗ ಅತಿಥಿಗಳಾಗಿ ಭಾಗಿಯಾಗಿದ್ದಾರೆ. ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ತ್ರೋಬಾಲ್ ಆಟಗಾರ ಭರತೇಶ್ ಗೌಡರಿಗೆ ಸನ್ಮಾನ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು