ಬಂದಾರು ಮೈದಾನದಲ್ಲಿ ಡಿ.25 ಹಾಗೂ 26ರಂದು ನಡೆಯಲಿರುವ ಆಹ್ವಾನಿತ 8 ತಂಡಗಳ ಅಂಡರ್ ಆರ್ಮ್‍ಕ್ರಿಕೆಟ್ ಪಂದ್ಯಾಟ ಬಂದಾರು ಪ್ರೀಮಿಯರ್ ಲೀಗ್ ಉದ್ಘಾಟನೆ- ಕಹಳೆ ನ್ಯೂಸ್
ಬೆಳ್ತಂಗಡಿ : ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ರಿ. ಅಲೆಕ್ಕಿ- ಮುಗೇರಡ್ಕ, ಮೊಗ್ರು ಬೆಳ್ತಂಗಡಿ ಇದರ ವತಿಯಿಂದ ಲೀಗ್ ಮಾದರಿಯ ಆಹ್ವಾನಿತ 8 ತಂಡಗಳ ಅಂಡರ್ ಆರ್ಮ್‍ಕ್ರಿಕೆಟ್ ಪಂದ್ಯಾಟ ಬಂದಾರು ಪ್ರೀಮಿಯರ್ ಲೀಗ್ ಇಂದು ಉದ್ಘಾಟನೆಗೊಂಡಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಕ್ರಿಕೆಟ್ ಪಂದ್ಯಾಟವನ್ನುಉದ್ಘಾಟಿಸಿದ್ರು. ಇದೇ ಪಂದ್ಯಾಟದಲ್ಲಿ ಹರಿಯಾಣ ವಿಶ್ವ ವಿದ್ಯಾಲಯದಲ್ಲಿ ನಡೆದರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ತಾಲೂಕಿನ ಕ್ರೀಡಾಪಟುಗಳಾದ ಅಭಿಶೃತ್ ಮುರ, ಸುಜಿತ್ ಬಿ.ಕೆ ಶ್ರೀರಾಮನಗರ, ಭರತೇಶ್ ನೆಲ್ಲಿ ದಂಡ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಪಂದ್ಯಾಟದಲ್ಲಿ ಉದಯ್ ಭಟ್, ಅಂತರಾಷ್ಟ್ರೀಯ ಕ್ರೀಡಾಪಟು ಪುರಂದರ ಪಿಜೆ, ಪುರಂದರ ಉಳಿಯ, ಗಣೇಶ್ ಕಲಯಿ, ರಕ್ಷಿತ್ ಪಣಕ್ಕರ್ ಸೇರಿದಂತೆ ಮಮತಾಗೌಡ ಕೆಲೆಂಜಿಮಾರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು